ಕಾರ್​ ಸೆಕ್ಸ್​ಗೂ ಮುನ್ನ ಈ ಟಿಪ್ಸ್ ನೋಡಿ.. ಇಲ್ಲದಿದ್ರೆ ಹೊಗೆ ಗ್ಯಾರಂಟಿ..!

ಕಾಮಾತುರಾಣಂ ನಾ ಭಯಂ ನಾ ಲಜ್ಜಾ ಅಂತ ಒಂದು ಸಂಸ್ಕೃತ ಗಾದೆಯಿದೆ. ಕಾಮ ವಾಂಛೆಯೆಂಬ ಮದನ ತಲೆಯೇರಿ ಕುಳಿತಾಗ ಯಾವ ಭಯವೂ ಯಾವ ನಾಚಿಕೆಯೂ ಇರುವುದಿಲ್ಲ. ಸ್ಥಳ, ಸಮಯ ಏನೂ ನೋಡದೆ ಜೋಡಿಗಳು ಮಿಲನಮಹೋತ್ಸವಕ್ಕೆ ಇಳಿದುಬಿಡ್ತಾರೆ. ಹೀಗೆ ಅವಸರದಲ್ಲಿ ಕೂಡವಿಕೆಗೆ ಸರಿಯಾದ ಉದಾಹರಣೆ ಎಂದರೆ ಕಾರ್​ ಸೆಕ್ಸ್​. ಹೀಗೆ ಕಾರ್​ನಲ್ಲಿ ದೈಹಿಕ ಸಾಂಗತ್ಯ ಬೆಳೆಸಲು ಹೋಗಿ ಬೆಂಗಳೂರಿನಲ್ಲಿ ಒಂದು ಜೋಡಿ ಅಸುನೀಗಿದೆ ಎಂದು ಹೇಳಲಾಗ್ತಿದೆ.

ಸ್ಥಳ: ಬೆಡ್​ರೂಮ್ ಹೇಗೆ ಒಂದು ಲೈಂಗಿಕ ವಾಂಚೆಯಲ್ಲಿ ಹೊಸ ಹುರುಪು ತರುತ್ತೋ ಹಾಗೆ ನೀವು ಕಾರ್​ನಲ್ಲಿ ಕೂಡಿಕೆಗೂ ಒಂದು ಮೂಡ್ ಅವಶ್ಯಕತೆ ಇದೆ. ಏಕಾಂತಕ್ಕೆ ಭಂಗ ತರುವಂಥ ಜಾಗಳಲ್ಲಿ ನೀವು ಸೇರುವುದು ರಸಭಂಗಕ್ಕೆ ಕಾರಣವಾಗಬಹುದು. ಅಲ್ಲದೇ ಯಾರಾದ್ರೂ ನೋಡಿಬಿಟ್ಟಾರು ಎಂಬ ಆತಂಕವೂ ಕಾಡಬಹುದು.

ಕಾರ್​ ಗಾತ್ರವೂ ಪ್ರಮುಖ ಪಾತ್ರವಹಿಸುತ್ತೆ: ನಿಮ್ಮ ಮಿಲನ ಕ್ರಿಯೆಗೆ ಕಾರ್​ ಗಾತ್ರವು ಕೂಡ ಪ್ರಮುಖ ಪಾತ್ರ ವಹಿಸುತ್ತೆ. ನಿಮ್ಮ ಆಸೆ ಉಕ್ಕಿದರೆ ಮಾತ್ರ ಸಾಲದು ಕಾರ್​ ಗಾತ್ರವು ನಿಮ್ಮ ಸಲ್ಲಾಪಕ್ಕೆ ಸರಿಹೊಂದುವಂತೆ ಇರಬೇಕು. ನೀವು ಆಸೆ ಪಡುವಂಥ ಪೊಸಿಷನ್​​​ಗೆ ಅದು ಹೊಂದುವಂತಿರಬೇಕು. ಚಿಕ್ಕ ಕಾರುಗಳಲ್ಲಿ ರತಿಕ್ರೀಡೆ ರಸವತ್ತಾಗಿರುವುದಿಲ್ಲ. ಜೊತೆಗೆ, ನಿಮ್ಮ ಖಾಸಗೀ ಜಾಗಗಳಿಗೆ ತಾಗಿ, ಗಾಯವಾಗುವ ಸಾಧ್ಯತೆ ಕೂಡ ಅಧಿಕ ವಾಗಿರುತ್ತೆ. ಹೀಗಾಗಿ ಆದಷ್ಟು ದೊಡ್ಡ ಕಾರುಗಳಿದ್ದರೆ ನಿಮ್ಮ ರಸನಿಮಿಷಗಳನ್ನು ದೀರ್ಘವಾಗಿ ಕಳೆಯಬಹುದು.

ಎಸಿ ಕಾರ್ಯನಿರ್ವಹಣೆ ಬಗ್ಗೆ ಗಮನವಿರಲಿ: ನೀವು ಕಾರಿನಲ್ಲಿ ಕೂಡುವ ಮೊದಲು ನಿಮ್ಮ ಕಾರ್ ಎಸಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯಾ ಇಲ್ಲವಾ ಗಮನಿಸಿ. ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಮಾತ್ರ ಮಿಲನ ಕ್ರಿಯೆಯಲ್ಲಿ ಭಾಗವಹಿಸಿ. ಜಾಮ್ ಆಗಿದ್ದಲ್ಲಿ.. ಕೆಟ್ಟು ನಿಲ್ಲುತ್ತಿದ್ದಲ್ಲಿ ಇಂತಹ ಸಾಹಸಕ್ಕೆ ಮುಂದಾಗಬೇಡಿ. ಅಲ್ಲದೇ, ನಿಮ್ಮ ಕಾರ್​​​ ಎಮಿಷನ್​​ ಪ್ರಮಾಣವನ್ನೂ ತಪಾಸಣೆ ಮಾಡಿಸುತ್ತಿರಿ. ಜೊತೆಗೆ, ಎಸಿಯಲ್ಲಿ ಸರಿಯಾದ ಪ್ರಮಾಣದ ಆಮ್ಲಜನಕ ಪರಿಚಲನೆಯಾಗುತ್ತಿದೆಯಾ ಅನ್ನೋದನ್ನೂ ಗಮನಿಸಿ. ಕೆಲವೊಮ್ಮೆ ಕಾರ್​​ನಲ್ಲಿ ಬಳಸಲಾಗುವ ಏರ್​ ಫ್ರೆಷನರ್​​ಗಳೂ ಕೂಡ ವಿಷದಂತೆ ಪ್ರಾಣಕ್ಕೆ ಕುತ್ತು ತರಬಹುದು. ಅಲ್ಲದೇ ತಾತ್ಕಾಲಿಕ ಸ್ಟ್ರೋಕ್, ಉಸಿರಾಟ ತೊಂದರೆ, ನಿಮಿರುವಿಕೆ ಬಾಧೆ ಕೂಡ ನಿಮಗೆ ತೊಂದರೆ ಉಂಟುಮಾಡಬಹುದು.

ಸಂಪೂರ್ಣ ಬೆತ್ತಲೆ ಆಗಬೇಡಿ: ಇನ್ನು ಕಾರಿನಲ್ಲಿ ನೀವು ರತಿಕ್ರೀಡೆಯಲ್ಲಿ ಪಾಲ್ಗೊಂಡಾಗ ಸಂಪೂರ್ಣವಾಗಿ ಬೆತ್ತಲೆ ಆಗದಿರುವುದೇ ಒಳ್ಳೆಯದು. ರತಿ ಕ್ರೀಡೆಯಲ್ಲಿ ತೊಡಗಿದಾಗ ದೇಹದ ಪ್ರತಿ ಕಣಕ್ಕೂ ಸಂಗಾತಿಯ ಸ್ಪರ್ಶದ ಅಭಿಲಾಷೆ ಇರುವುದು ಸಹಜ. ಸಂಪೂರ್ಣ ಬೆತ್ತಲಾದಾಗಲೇ ಬೇರ್ಪಡಿಸದಂಥ ಬಂಧ ನಿರ್ಮಾಣವಾಗುತ್ತೆ ಅನ್ನೋದು ಸಹಜವೇ. ಆದ್ರೆ, ಕಾರ್​​​ ಸೆಕ್ಸ್​​ನಲ್ಲಿ ತೊಡಗಿದಾಗ ನೀವು ಬೆತ್ತಲಾಗದಿರುವುದೇ ಒಳ್ಳೆಯದು. ಯಾಕಂದ್ರೆ ಒಂದು ವೇಳೆ ಕಾರ್​​ನಲ್ಲಿ ಉಸಿರಾಟದ ತೊಂದರೆ ಆದ್ರೆ ಅಥವಾ ಬೇರೆ ಏನಾದ್ರೂ ಸಮಸ್ಯೆ ಉಂಟಾದರೆ ಯಾವುದೇ ಮುಜುಗರವಿಲ್ಲದೇ ಹೊರಗೆ ಬರಬಹುದು.

ಕಾರಿನಲ್ಲಿರಲಿ ಮ್ಯೂಸಿಕ್: ಬೆಡ್​ರೂಮ್​ನಲ್ಲಿ ನಿಮ್ಮ ಮೂಡ್​ ಫ್ರೆಶ್​ ಮಾಡುವಂತಹ ಮ್ಯೂಸಿಕ್ ಕೇಳುವಂತೆ ಕಾರಿನಲ್ಲಿಯೂ ಕೂಡ ಅದೇ ರೀತಿಯ ಮ್ಯೂಸಿಕ್ ಇರಲಿ. ಸುಮಧುರ ಗೀತೆಗಳಿಂದ ನಿಮ್ಮ ಸುಮಧುರ ಕ್ಷಣಗಳು ಕೂಡ ದೀರ್ಘವಾಗುತ್ತವೆ. ಅಲ್ಲದೇ ನೀವು ರತಿ ಕ್ರಿಡೆಯಲ್ಲಿ ತೊಡಗಿದಾಗ ಉಂಟು ಮಾಡುವ ಸೌಂಡು ಹೊರಗೆ ಹೋಗಿ, ಅನ್​ ವಾಂಟೆಂಡ್ ಅಟೆನ್ಷನ್ ಸೆಳೆಯುವುದು ತಪ್ಪುತ್ತೆ.

ಬ್ಯಾಕ್ ಸೀಟ್​ ಉತ್ತಮ: ಇನ್ನು ನೀವು ಕಾರಿನಲ್ಲಿ ಮಿಲನಮಹೋತ್ಸವ ಸಂಭ್ರಮಿಸುವ ಆತುರದಲ್ಲಿದ್ದಲ್ಲಿ ನಿಮಗೆ ಬ್ಯಾಕ್ ಸೀಟ್​ ಸಮರ್ಪಕವಾದ ಸ್ಥಳ. ಫ್ರಂಟ್​ ಸೀಟ್​ನಲ್ಲಿ ನೀವು ಮಿಲನಕ್ರಿಯೆಯಲ್ಲಿ ತೊಡಗಿದರೆ ಅತ್ಯುತ್ತಮ ಭಂಗಿಗಳು ದೊರಕುವುದಿಲ್ಲ. ಹೀಗಾಗಿ ಬ್ಯಾಕ್​ ಸೀಟ್​ನಲ್ಲಿ ಬಾಹುಬಂಧಗಳಲ್ಲಿ ಬೆಸೆದುಕೊಳ್ಳುವುದು ಉತ್ತಮ. ಆದ್ರೆ 69 ಪೊಸೀಷನ್ ಸಾಧ್ಯವಾದಷ್ಟು ಅವೈಡ್ ಮಾಡಿ..!

ಡ್ರಗ್ಸ್​​, ಕುಡಿತ ಬೇಡ: ಅದು ಯಾವುದೇ ರೀತಿಯ ರತಿ ಕ್ರಿಡೆಯಾಗಿದ್ರೂ ಸೆಕ್ಸ್​​ಗೂ ಮುನ್ನ ಕುಡಿತವಾಗಲೀ, ಸ್ಮೋಕ್ ಮಾಡೋದಾಗಲಿ ನಿಷೇಧಿತವಾಗಿರಲಿ. ಅದ್ರಲ್ಲೂ ಕಾರ್​​ ಸೆಕ್ಸ್​​ನಲ್ಲಂತೂ ಇದು ಬೇಡವೇ ಬೇಡ. ಯಾಕಂದ್ರೆ, ಮಾದಕ ದ್ರವ್ಯಗಳ ದೆಸೆಯಿಂದ ನಿಮ್ಮ ಮೇಲೆ ನಿಮಗೇ ಹಿಡಿತ ಸಿಗದೇ ನಿಮ್ಮ ಪ್ರಾಣ ಪಕ್ಷಿಯೂ ಹಾರಬಹುದು ಅಥವಾ ನಿಮ್ಮ ಸಂಗಾತಿಗೂ ಅತೀವ ಸಂಕಟ ಉಂಟಾಗಬಹುದು.

ವಯಾಗ್ರದ ಬಗ್ಗೆಯೂ ಇರಲಿ ಎಚ್ಚರ: ಸೆಕ್ಸ್​ಗೂ ಮುನ್ನ ವಯಾಗ್ರ ಸೇವನೆ ತಪ್ಪಲ್ಲ. ಆದ್ರೆ, ಇದರ ಸೇವನೆಯಿಂದಾಗಿ ರಕ್ತದ ಪರಿಚಲನೇ ವೇಗ ಪಡೆದುಕೊಳ್ಳುತ್ತೆ. ಅಲ್ಲದೇ. ಪುರುಷಾಂಗದತ್ತ ರಕ್ತ ಪರಿಚಲನೆ ಹೆಚ್ಚಾಗುತ್ತೆ. ಇದು ಸಹಜವಾಗಿ ಹೃದಯ ಬಡಿತದ ವೇಗವನ್ನು ಹೆಚ್ಚಿಸುತ್ತೆ ಅನ್ನೋದನ್ನು ಜೋಡಿಗಳು ತಿಳಿದಿರಬೇಕು. ಹೀಗಾದಾಗ ಅಧಿಕ ಪ್ರಮಾಣದಲ್ಲಿ ಆಮ್ಲಜನಕದ ಅವಶ್ಯಕತೆ ಇರುತ್ತೆ. ಆದ್ರೆ, ಕಾರ್​ ಸೆಕ್ಸ್​​ನಲ್ಲಿ ಅಷ್ಟು ಪ್ರಮಾಣದ ಆಮ್ಲಜನಕ ಪೂರೈಕೆ ಸಾಧ್ಯ ವಾಗದೇ ಇದ್ದಾಗ ಸಾವು ಸನ್ನಿಹಿತ ಎಂದೇ ಭಾವಿಸಬೇಕಾಗುತ್ತೆ. ಹೀಗಾಗಿ, ಕಾರ್​ನಲ್ಲಿ ಸೆಕ್ಸ್​ ಮಾಡಿ ಬೇಡ ಅಂತಲ್ಲ. ಆದ್ರೆ, ಅದಕ್ಕೂ ಮುನ್ನ ಅವಶ್ಯಕ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.

ವಿಶೇಷ ಬರಹ: ಗೋಪಾಲ್ ಕುಲಕರ್ಣಿ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv