ಮೈತ್ರಿ ಅಭ್ಯರ್ಥಿಗಳ ಸೋಲಿಗೆ ಸಿದ್ದರಾಮಯ್ಯ ಒಳಸಂಚು -ಪ್ರತಾಪ್​ ಸಿಂಹ

ಮೈಸೂರು: ತುಮಕೂರಿನಲ್ಲಿ ಮುದ್ದಹನುಮೇಗೌಡರನ್ನು ಎತ್ತಿಕಟ್ಟಿರುವುದು, ಹಾಸನದಲ್ಲಿ ವಿರೋಧ ಮಾಡುತ್ತಿರುವುದು, ಮಂಡ್ಯದಲ್ಲಿ ಸುಮಲತಾ ಅವರನ್ನು ಅಭ್ಯರ್ಥಿ ಮಾಡಿರುವುದು ಸಿದ್ದರಾಮಯ್ಯ ಅವರ ಒಳಸಂಚು ಅಂತಾ ಸಂಸದ ಪ್ರತಾಪ್​ ಸಿಂಹ ಆರೋಪಿಸಿದ್ದಾರೆ. ನಗರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯರ ಒಳಸಂಚು ಜೆಡಿಎಸ್‌ನವರಿಗೂ ಗೊತ್ತಾಗಿದೆ ಅಂತಾ ಕಿಡಿಕಾರಿದ್ರು. ಇನ್ನು ನನ್ನ ಬಾಯಿ ಬೊಂಬಾಯಿ, ಅಭಿವೃದ್ಧಿ ಶೂನ್ಯ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದ ಸಿಂಹ, ಬಾಯಿ ಬೊಂಬಾಯಿ, ಅಭಿವೃದ್ಧಿ ಶೂನ್ಯ ಎಂಬುದು ಜನರಿಗೆ ಗೊತ್ತಾಗಿದೆ. ಆದ್ದರಿಂದಲೇ ಜನ ಸಿದ್ದರಾಮಯ್ಯ ಅವರನ್ನ ಚಾಮುಂಡೇಶ್ವರಿಯಿಂದ ಬದಾಮಿಗೆ ಕಳುಹಿಸಿದ್ದಾರೆ. ಮೈತ್ರಿ ಎಲ್ಲಿದೆ, ಮೈತ್ರಿ ಎಂಬುದೇ ಇಲ್ಲ ಎಂದು ಲೇವಡಿ ಮಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv