ರಾಷ್ಟ್ರಪತಿಯಾಗಿದ್ದಾಗಿನ ಅನುಭವಗಳನ್ನ ಬರೀತಾರಂತೆ ಪ್ರಣಬ್

ನವದೆಹಲಿ: ಇತ್ತೀಚಿಗೆ ಆರ್​ಎಸ್​ಎಸ್​ ಕಾರ್ಯಕ್ರಮಕ್ಕೆ ಹಾಜರಾಗಿ ಇಡೀ ದೇಶವೆ ನಿಬ್ಬೆರಗಾಗುವಂತೆ ಮಾಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಇನ್ನೊಂದು ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು. ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿದ್ದಾಗಿನ ತಮ್ಮ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಹೊರತರಲು ಸಿದ್ಧರಾಗಿದ್ದಾರೆ.

‘ದಿ ಪ್ರಸಿಡೆನ್ಶಿಯಲ್ ಇಯರ್ಸ’ ಎನ್ನುವ ಶೀರ್ಷಿಕೆಯಡಿ ತಮ್ಮ ಅನುಭವಗಳನ್ನು ಬಿಚ್ಚಿಡಲಿದ್ದಾರೆ ಪ್ರಣಬ್. ಈ ಕುರಿತು ಪ್ರಣಬ್ ಮುಖರ್ಜಿಯವರು ಟ್ವಿಟರ್​ನಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಪ್ರಣಬ್ ಮುಖರ್ಜಿಯವರ ಅವಧಿಯಲ್ಲಾದ ಅಭಿವೃದ್ಧಿಗಳು, ಅರುಣಾಚಲ ಪ್ರದೇಶದಲ್ಲಿ ಹೇರಲಾದ ರಾಷ್ಟ್ರಪತಿ ಆಡಳಿತ, ಮೋದಿ ಸರ್ಕಾರದ ಪ್ರಮುಖ ನಿರ್ಧಾರಗಳಾದ ನೋಟ್ ಬ್ಯಾನ್, ಸರ್ಜಿಕಲ್ ಸ್ಟ್ರೈಕ್​ ಇವೆಲ್ಲವುಗಳ ಬಗ್ಗೆ ಪ್ರಣಬ್​ರ ಪುಸ್ತಕ ಬಿಚ್ಚಿಡಲಿದೆ. ಇನ್ನು ಈ ಪುಸ್ತಕವನ್ನು ಹೊರತರಲಿರುವ ರೂಪಾ ಪಬ್ಲಿಕೇಷನ್ಸ್ ನಿರ್ದೇಶಕ ಕಪೀಶ್ ಮೆಹ್ರಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್​ಡಿಎ ಸರ್ಕಾರದ ಜೊತೆ ಪ್ರಣಬ್ ಮುಖರ್ಜಿಯವರು ಹೊಂದಿದ್ದ ಸಂಬಂಧದ ಬಗ್ಗೆಯೂ ಕೂಡ ಈ ಪುಸ್ತಕ ಮಾಹಿತಿ ನೀಡಲಿದೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv