‘ಕ್ರಿಶ್ಚಿಯನ್ ಮಿಷನರಿಗಳಿಂದ ಹಣ ಪಡೆದು ಸರ್ಜಾ ಮೇಲೆ ಆರೋಪ ಮಾಡ್ತಿದ್ದಾರೆ ಶೃತಿ’

ದಾವಣಗೆರೆ: ಶೃತಿ ಹರಿಹರನ್ ಅಮೆರಿಕಾದ ಕ್ರಿಶ್ಚಿಯನ್ ಮಿಷನರಿಗಳಿಂದ ಹಣ ಪಡೆದು,ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, #MeToo ಅಭಿಯಾನ ನೊಂದ ಮಹಿಳೆಯ ಪರವಾದ ಅಭಿಯಾನ. ಇದಕ್ಕೆ ನಮ್ಮ ಬೆಂಬಲ ಇದ್ದೇ ಇದೆ. ಆದರೆ, ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ #MeToo ಆರೋಪ ವಿಚಾರದಲ್ಲಿ ನಾವು ಅರ್ಜುನ್ ಸರ್ಜಾ ಪರವಾಗಿ ನಿಲ್ಲುತ್ತೇವೆ. ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡುವಂತಹ ವ್ಯಕ್ತಿ ಅಲ್ಲ. ನಾಲ್ಕೈದು ಭಾಷೆಗಳಲ್ಲಿ ನಟನೆ ಮಾಡಿದ ಬಹುಭಾಷ ನಟ ಎನಿಸಿಕೊಂಡಿದ್ದಾರೆ ಅವರು. ಅರ್ಜುನ್ ಸರ್ಜಾಗೆ ಈ ವಿಚಾರಲ್ಲಿ ನ್ಯಾಯ ಸಿಗಬೇಕಿದೆ. ಕ್ರಿಶ್ಚಿಯನ್ ಮಿಷನರಿಗಳ ಕುತಂತ್ರದ ಫಲವಾಗಿ ಶೃತಿ ಹರಿಹರನ್ ಈ ಆರೋಪ ಮಾಡುತ್ತಿದ್ದಾರೆ. ಇದೊಂದು ನೂರಕ್ಕೆ ನೂರರಷ್ಟು ಸುಳ್ಳು ಆರೋಪ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv