ಶ್ರೀರಾಮಸೇನೆ ಕಾರ್ಯಕರ್ತನಾ ಪರಶುರಾಮ್..!

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪರಶುರಾಮ್​ ವಾಗ್ಮೋರೆ ಶ್ರೀರಾಮಸೇನೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಜೊತೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಜೊತೆ ತೆಗೆಸಿಕೊಂಡಿರುವ ಫೋಟೋ ಕೂಡ ಲಭ್ಯವಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜನಿಸಿದ ಪರಶುರಾಮ ವಾಗ್ಮೋರೆ, ಇದೇ ಜಿಲ್ಲೆಯ ಮಾನ್ವಿಯಲ್ಲಿ ಪಿಯು ವರೆಗೆ ವಿದ್ಯಾಭ್ಯಾಸ ಮಾಡಿದ್ದ. ಕಳೆದ ಆರು ವರ್ಷಗಳಿಂದ ವಿಜಯಪುರದ ಸಿಂದಗಿಗೆ ಬಂದು ನೆಲೆಸಿದ್ದ ಪರಶುರಾಮ, ಲಿಂಗಸಗೂರು ತಾಲೂಕಿನಲ್ಲಿ ಬಿ.ಕಾಂ (ಎಕ್ಟರ್ನಲ್) ಓದಿನ ಜೊತೆಗೆ ಕೆಲಸ ಮಾಡಿಕೊಂಡಿದ್ದ ಅಂತ ಮಾಹಿತಿ ತಿಳಿದು ಬಂದಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv