ತಾಯಿಯೊಡನೆ ತೆರಳಿ ನಾಮಪತ್ರ ಸಲ್ಲಿಸಿದ ಪ್ರಮೋದ್​ ಮಧ್ವರಾಜ್​​

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್​ ಮಧ್ವರಾಜ್​​ ನಿನ್ನೆ ಉಡುಪಿ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಪ್ರಮೋದ್ ಮಧ್ವರಾಜ್​ ಬಿಜೆಪಿ ಸೇರ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಗಾಳಿ ಸುದ್ದಿಗೆ ಈಗ ತೆರೆ ಬಿದ್ದಿದ್ದು ಪ್ರಮೋದ್ ಮಧ್ವರಾಜ್​ ಕಾಂಗ್ರೆಸ್​​ನಿಂದಲೇ ಕಣಕ್ಕಿಳಿದಿದ್ದಾರೆ.
ಇದಕ್ಕೂ ಮೊದಲು ಪ್ರಮೋದ್ ಮಧ್ವರಾಜ್​ ತಮ್ಮ ತಂದೆ ದಿವಂಗತ ಮಲ್ಪೆ ಮಧ್ವರಾಜ್​​ ಸಮಾಧಿಗೆ ನಮಿಸಿ, ನಂತರ ತಾಯಿ ಮನೋರಮಾ ಮಧ್ವರಾಜ್​​ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *