ಪ್ರಹ್ಲಾದ್ ಜೋಷಿ ಗೆದ್ದು, ಮುಂದೆ ಕೇಂದ್ರ ಮಂತ್ರಿಯೂ ಆಗ್ತಾರೆ: ತಾರಾ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಗೆದ್ದು ಬಂದು, ಮುಂದೆ ಕೇಂದ್ರಮಂತ್ರಿಯೂ ಅಗುತ್ತಾರೆ. ಈ ಬಗ್ಗೆ ಸಂಪೂರ್ಣ ವಿಶ್ವಾಸ ನಮ್ಮಗೆ ಇದೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ, ನಟಿ  ತಾರಾ ಅನುರಾಧ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜೋಶಿಯವರ‌ ಅಭಿವೃದ್ಧಿ ಕಾರ್ಯ ಹಾಗೂ ಮೋದಿಯವರ ಜನಪ್ರಿಯ ಯೋಜನೆಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಈ ಭಾಗದಲ್ಲಿ ನನಗೆ ಹೆಚ್ಚು ಕೆಲಸವಿಲ್ಲ. ಯಾಕೆಂದರೆ ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಗೆದ್ದೆೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಮುಂದುವರೆದ ದೇಶವನ್ನಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಧಾನಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮೋದಿಯವರು ಯಶಸ್ವಿ ನಾಯಕತ್ವವನ್ನು ನೀಡಿದ್ದಾರೆ. ಕ್ಷೇತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಹ್ಲಾದ್ ಜೋಶಿಯವರು ದೇಶದ ಏಳನೇ ಸ್ಥಾನದಲ್ಲಿ ಇದ್ದಾರೆ. ಏಳನೇ ಲೋಕಸಭಾ ಸದಸ್ಯರಾಗಿ ಅವರು ಈಗ ನಿಂತಿದ್ದಾರೆ. ಅವಳಿ‌ ನಗರಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅವರ ನಿಧಿಯಿಂದ ಅಭಿವೃದ್ಧಿ ಮಾಡಿದ್ದಾರೆ. ನಾಲ್ಕನೇ ಬಾರಿ ಧಾರವಾಡ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಾರಾ ಹೇಳಿದರು.

ಇದೇ ವೇಳೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವುದೇ ಒಂದು ಧರ್ಮ, ಆಚಾರಣೆಗಳು ಇದ್ದಾಗ ಅದನ್ನು ಪಾಲಿಸುವುದು ಧರ್ಮ. ಈ ವಿಚಾರದಲ್ಲಿ ಬೇರೆ ಪಕ್ಷದವರು ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಧರ್ಮ ಒಡೆಯುವ ಕೆಲಸಕ್ಕೆ ಯಾರೊಬ್ಬರೂ ಕೈ ಹಾಕಬಾರದು. ಕೇರಳದಲ್ಲಿ ಕೆಲವು ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಇದಕ್ಕೆ ಪ್ರವೇಶ ನೀಡಿ ಅಂತಾ ಯಾರೂ‌ ಕೂಡಾ ಇದುವರೆಗೂ ಹೋರಾಟ ಮಾಡಲಿಲ್ಲ. ಒಂದು ಧರ್ಮದ ಆಚರಣೆ ನಿಯಮವನ್ನು ಮುರಿಯುವುದು ತಪ್ಪು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv