‘ಕಾಂಗ್ರೆಸ್​ ಪ್ರಣಾಳಿಕೆಯಿಂದ ನಕ್ಸಲರಿಗೆ, ಉಗ್ರರಿಗೆ ಅನುಕೂಲ ಆಗಲಿದೆ’

ಧಾರವಾಡ: ಕಾಂಗ್ರೆಸ್ ಪಕ್ಷ ನಿನ್ನೆ ಬಿಡುಗಡೆ ಮಾಡಿರೋ ಪ್ರಣಾಳಿಕೆ ಮಾವೋವಾದಿಗಳಿಗೆ, ಲಷ್ಕರ್‌ ಉಗ್ರರಿಗೆ ಅನುಕೂಲ ಆಗಲಿದೆ ಅಂತಾ ಸಂಸದ ಪ್ರಹ್ಲಾದ್​ ಜೋಶಿ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಸೈನಿಕರ ನೈತಿಕತೆ ಕುಸಿಯುವ ಕೆಲಸ ಮಾಡುತ್ತಿದೆ. ಭಯೋತ್ಪಾದಕರಿಗೆ ಸಹಾಯ ಮಾಡೋ ಕೆಲಸವನ್ನ ಕಾಂಗ್ರೆಸ್​ ಮಾಡುತ್ತಿದೆ. ಕಾಂಗ್ರೆಸ್‌ ದೇಶ ವಿರೋಧಿಯಾಗಿದ್ದು, ಬೌದ್ಧಿಕವಾಗಿ ದಿವಾಳಿಯಾಗಿದೆ. ರಾಹುಲ್ ಗಾಂಧಿ ಏನೂ ಓದೋಲ್ಲ, ಬರೆಯಲ್ಲ. ಯಾರೋ ಬರೆದು ಕೊಟ್ಟಿರೋ ಪ್ರಣಾಳಿಕೆಯನ್ನ ಓದಿದ್ದಾರೆ. ಕೂಡಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನ ಹಿಂಪಡೆಯಲಿ ಅಂದರು.

ಮೋದಿಯವರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ನೆರವು ನೀಡಿದೆ. ರಾಜ್ಯ ಸರ್ಕಾರದ ತಪ್ಪಿನಿಂದ ಅಭಿವೃದ್ಧಿ ಕುಂಠಿತವಾಗಿದೆ. ವಿನಯ್ ಕುಲಕರ್ಣಿ ನಾಲ್ಕು ವರ್ಷ ಸಚಿವರಾಗಿ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ? ನಾನು ಏನು ಕೆಲಸ ಮಾಡಿದ್ದೇನೆಂದು ಜನರ ಮುಂದೆ ಇಟ್ಟಿದ್ದೇನೆ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv