ಲಿಂಗಾಯತ-ವೀರಶೈವ ಧರ್ಮ ವಿಭಜನೆ ರಾಜಕೀಯ ಲಾಭಕ್ಕಾಗಿ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಲಿಂಗಾಯತ-ವೀರಶೈವ ಧರ್ಮ ವಿಭಜನೆ ರಾಜಕೀಯ ಲಾಭಕ್ಕಾಗಿ ಅನ್ನೋದು ಬಯಲಾಗಿದೆ. ಜನತೆ ಒಳಿತು ಮಾಡುವ ಉದ್ದೇಶದಿಂದ ಧರ್ಮ ಹೋರಾಟ ರೂಪಿಸಿದ್ದಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಎಂಥ ಕೀಳುಮಟ್ಟದ ರಾಜಕೀಯ ಮಾಡಲು ಹಿಂಜರಿಯಲ್ಲ. ಹಿಂದೂ ಭಯೋತ್ಪಾದಕ ಶಬ್ದ ಹುಟ್ಟು ಹಾಕಿದ್ದೆ ಕಾಂಗ್ರೆಸ್. ಯುಪಿಎ ಎರಡನೇಯ ಅವಧಿಯಲ್ಲಿ ಭಯೋತ್ಪಾದನೆ ತುತ್ತ ತುದಿಗೆ ತಲುಪಿದ್ದವು. ಭಯೋತ್ಪಾದಕ ದಾಳಿ ನಡೆದಾಗಲೆಲ್ಲ, ಹಿಂದೂ ಸಂಘಟನೆಗಳನ್ನು, ಆರ್‌ಎಸ್‌ಎಸ್‌ ಹೆಸರ ಸಿಲುಕಿಸಲು ಯತ್ನಿಸಿದ್ದರು ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.

ಕಾಂಗ್ರೆಸ್-ಜೆಡಿಎಸ್ ಯಾವುದೇ ಸೈದ್ಧಾಂತಿಕ ನಿಲುವುಗಳಿಲ್ಲ. ಮಹಾದಾಯಿ ವಿಚಾರದಲ್ಲಿ ರೈತರನ್ನು ಎತ್ತಿಕಟ್ಟುವ ಕೆಲಸ‌ ನಡೆಯುತ್ತಿದೆ. ಬಿಜೆಪಿ ವಿರುದ್ಧ, ನನ್ನ ವಿರುದ್ಧ ರೈತರನ್ನು ಎತ್ತಿಕಟ್ಟಲಾಯಿತು. ಆದ್ರೆ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಜನತೆ ಪಾಠ‌ ಕಲಿಸಿದ್ದಾರೆ. ನವಲಗುಂದ, ನರಗುಂದದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಜನತೆ ಪಾಠ ಕಲಿಸಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv