ಕಾಂಗ್ರೆಸ್‌ನವರ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಷಿ

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ನನ್ನ ಕ್ಷೇತ್ರದಲ್ಲಿ ಬರುವ ಹಳ್ಳಿಗಳಿಗೆ 96% ರಷ್ಟು ಭೇಟಿ ನೀಡಿದ್ದೇನೆ ಎಂದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಿನಾಚರಣೆ ಹಿನ್ನೆಲೆ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪನೆ ಮಾಡಿ, ಬಳಿಕ ಮಾತನಾಡಿದ ಅವರು, ರಕ್ತ ರಹಿತ ಆಡಳಿತ ವ್ಯವಸ್ಥೆಯನ್ನು ಡಾ. ಬಾಬಾ ಸಾಹೇಬ್ ನೀಡಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದವರು ಅಂಬೇಡ್ಕರ್‌ರವರು. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ನಂತರ ಅಂಬೇಡ್ಕರ್‌ರವರಿಗೆ ಅತ್ಯುನ್ನತ ಗೌರವ ನೀಡಿದೆ ಎಂದು ಪ್ರಹ್ಲಾದ್ ಜೋಷಿ ಹೇಳಿದರು.

ಒಂದು ಗ್ರಾಮಕ್ಕೆ ಎರಡು ಬಾರಿ ಕೆಲವು ಗ್ರಾಮಗಳಿಗೆ ಒಂದು ಬಾರಿಯಾದ್ದರು ಭೇಟಿ ನೀಡಿದ್ದೇನೆ. ನಮ್ಮ ಸರ್ಕಾರದಿಂದ ಪ್ರತಿ‌ ತಾಲೂಕುಗಳಿಗೆ ₹ 105 ಕೋಟಿ ರೂ. ಅನುದಾನ ನೀಡಿದ್ದೇವೆ. ಹತ್ತು ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಇಡೀ ಕ್ಷೇತ್ರಕ್ಕೆ ₹ 44  ರಿಂದ ₹ 45 ಕೋಟಿ‌ ಹಣ ನೀಡಿತ್ತು. ನಾವು ಸೆಂಟ್ರ ರೋಡ್ ಫಂಡ್‌ನಿಂದ ಹಣ ನೀಡಿದ್ದೇವೆ. ಫಸಲ್ ಭೀಮಾ ಯೋಜನೆಯಲ್ಲಿ ರೈತರು ಐದು ಸೀಜನ್‌ನಲ್ಲಿ ತುಂಬಿದ್ದು ₹ 65 ಕೋಟಿ‌. ಎಲ್ಲರೊಂದಿಗೆ ಕೋರ್ಡಿನೇಷ್‌ನ್ ಮಾಡಿ 410 ಕೋಟಿ ರೂಪಾಯಿ ಕೋಡಿಸಿದ್ದೇವೆ. ರೈತರಿಗೆ ಪೇನ್ಸನ್ ನೀಡುವುದು ಹಾಗೂ ರೈತರ ಅಕೌಂಟ್‌ಗಳಿಗೆ ದುಡ್ಡು ಹಾಕುವುದು ವ್ಯವಸ್ಥಿತವಾಗಿ ಸಾಗಿವೆ. ಕಾಂಗ್ರೆಸ್‌ನವರು ಸಂಸದರು ಗ್ರಾಮಗಳಿಗೆ ಭೇಟಿ ನಿಡಿಲ್ಲ ಎಂದು ಹೇಳುವುದು ಹತಾಶಯ ಪ್ರತೀಕ. ಜನ ಯಾರಿಗೆ ಏನು ಮಾಡುಬೇಕು ಎಂಬ ತೀರ್ಮಾನ ಕೈಗೊಳ್ಳುತ್ತಾರೆ. ನನ್ನ ಕ್ಷೇತ್ರದ ಜನರ ಮೇಲೆ ನನಗೆ ನಂಬಿಕೆ ಇದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ‌ತಂದಿದ್ದೇವೆ. ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಹಣ ಕೊಡಿಸಿದ್ದೇನೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ಪ್ರತಿಯೊಂದು ತಾಲೂಕಿನ ಗ್ರಾಮೀಣ ಶಾಲೆಗಳಿಗೆ ₹ 60 ರಿಂದ ₹ 70 ಲಕ್ಷ ಕೋಡಿಸಲಿದ್ದೇನೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv