ಸುಮಲತಾಗಿಂತ ನಿಖಿಲ್ ಕುಮಾರಸ್ವಾಮಿಯೇನು ಯೋಗ್ಯ ಅಭ್ಯರ್ಥಿಯಲ್ಲ -ಪ್ರಕಾಶ್ ರೈ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಸುಮಲತಾಗಿಂತ ಯೋಗ್ಯ ಅಭ್ಯರ್ಥಿಯಲ್ಲ ಅಂತಾ ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರ ನಟ, ಬೆಂ. ಕೇಂದ್ರ ಲೋಕ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರೈ ಬ್ಯಾಟ್​ ಬೀಸಿದ್ದಾರೆ. ಪ್ರಸ್​​​ ಕ್ಲಬ್​​​ನ ಮಾಧ್ಯಮ ಸಂವಾದದಲ್ಲಿ​ ಮಾತನಾಡಿದ ಪ್ರಕಾಶ್​ ರೈ, ನಿಖಿಲ್ ಯುವಕ. ಅಂದ್ರೆ ಚುನಾವಣೆ ರನ್ನಿಂಗ್ ರೇಸ್ ಕಾಂಪಿಟೇಶನ್ ಅಲ್ಲ. ಅರ್ಹತೆ ಅಂದರೆ ವಯಸ್ಸಲ್ಲ. ಅವರ ನಡೆ, ಮಾತು, ಅನುಭವ ಮುಖ್ಯ. ಅರ್ಹತೆ ಇದ್ದರೆ ಕುಟುಂಬ ರಾಜಕಾರಣ ಆಗಲ್ಲ. ಆರ್ಹತೆ ಇಲ್ಲದಿದ್ದರೆ ಅದು ಕುಟುಂಬ ರಾಜಕಾರಣ ಆಗುತ್ತೆ. ಸುಮಲತಾ ಅವರಿಗೆ ರಾಜಕೀಯದ ಬಗ್ಗೆ ಸ್ಪಷ್ಟತೆ ಇದೆ, ಅವರು ಗೆಲ್ಲಬೇಕು ಅಂತಾ ಹೇಳಿದ್ರು. ಇದೇ ವೇಳೆ, ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ. ಸುಮಲತಾಗಿಂತ ಯೋಗ್ಯ ಅಭ್ಯರ್ಥಿ ಎದುರಾಳಿ ಆಗಿದ್ದರೆ ಅವರನ್ನು ಬೆಂಬಲಿಸಬಹುದಿತ್ತು ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv