ಕೈ ಕಾರ್ಯಕರ್ತರ ಅಸಮಾಧಾನ ತಣಿಸಿ ಎಂದು ಪರಮೇಶ್ವರ್​ ಮೊರೆ ಹೋದ ಪ್ರಜ್ವಲ್

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಡಿಸಿಎಂ ಡಾ. ಜಿ. ಪರಮೇಶ್ವರ್​ ಅವರನ್ನ ಬಿಎಂಆರ್ ಡಿಎಲ್ ಕಚೇರಿಯಲ್ಲಿ ಭೇಟಿಯಾದರು. ಈ ವೇಳೆ ಅವರು, ಹಾಸನದಲ್ಲಿ ಕೈ  ಕಾರ್ಯಕರ್ತರ ಅಸಮಾಧಾನ ತಣಿಸಿ, ತಮ್ಮನ್ನ ಬೆಂಬಲಿಸುವಂತೆ ಮನವಿ  ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಹಾಸನದಲ್ಲಿ ಪ್ರಜ್ವಲ್​ ರೇವಣ್ಣ  ಮೈತ್ರಿ ಅಭ್ಯರ್ಥಿಯಾಗಿ  ಕಣಕ್ಕೆ ಇಳಿದಿರೋದ್ರಿಂದ, ಕಾಂಗ್ರೆಸ್​ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನಲ್ಲಿದ್ದ ಮಾಜಿ ಸಚಿವ ಎ. ಮಂಜು ಅವರು, ಬಿಜೆಪಿಗೆ ಸೇರಿ ಪ್ರಜ್ವಲ್​ ರೇವಣ್ಣ  ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv