ತವರೂರಲ್ಲಿ ಪ್ರಚಾರಕ್ಕಿಳಿದ ಪ್ರಜ್ವಲ್​..!

ಹಾಸನ: ನಗರದಲ್ಲಿ ಇಂದು ಹಾಸನ ಲೋಕಸಭಾ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭರ್ಜರಿ ಪ್ರಚಾರ ನಡೆಸಿದ್ರು. ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು  ಜೊತೆಯಾಗಿದ್ದು, ಬೇಲೂರು-ಅರಸೀಕೆರೆ ತಾಲೂಕಿನಲ್ಲಿ ಜಂಟಿ ಪ್ರಚಾರ ನಡೆಸಲಾಯಿತು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ‌ ಸಚಿವ  ಬಿ.ಶಿವರಾಂ ಪ್ರಜ್ವಲ್​ ರೇವಣ್ಣಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ರು.

ಪ್ರಚಾರದಲ್ಲಿ ಮಾತನಾಡಿದ ಪ್ರಜ್ವಲ್, ರಾಜ್ಯ ಸಮ್ಮಿಶ್ರ ಸರ್ಕಾರ ಉತ್ತಮ ಯೋಜನೆ ಜಾರಿ ಮಾಡಿದೆ. ನನ್ನನ್ನು ಗೆಲ್ಲಿಸುವ ಮೂಲಕ ಸರ್ಕಾರವನ್ನು ಬಲಗೊಳಿಸಿ ಎಂದು ಮನವಿ ಮಾಡಿದ್ರು. ಬಳಿಕ ಮಾತನಾಡಿದ ಬಿ.ಶಿವರಾಂ,  ಪ್ರಜ್ವಲ್​ ಯುವನಾಯಕ ನಮಗೆ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರನ್ನ ಗೆಲ್ಲಿಸಲು ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಹೋಗುತ್ತೇವೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv