ಗೆಲುವಿಗಾಗಿ ಪಣ ತೊಟ್ರು ಅಣ್ಣ-ತಮ್ಮ; ಪ್ರತ್ಯೇಕ ಮತ ಬೇಟೆಗಿಳಿದ ಸೂರಜ್, ಪ್ರಜ್ವಲ್ ರೇವಣ್ಣ..!

ಹಾಸನ: ಚನ್ನರಾಯಪಟ್ಟಣ-ಹಾಸನ ತಾಲೂಕಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ  ಪ್ರಚಾರ ಆರಂಭಿಸಿದ್ರೆ, ಇನ್ನೊಂದೆಡೆ ಪ್ರಜ್ವಲ್​ ಸಹೋದರ  ಡಾ.ಸೂರಜ್ ‌ ರೇವಣ್ಣ ಶಾಂತಿಗ್ರಾಮ ಹೋಬಳಿಯಲ್ಲಿ ಮತಬೇಟೆ ನಡೆಸುತ್ತಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಗುಲಸಿಂದ ಗ್ರಾಮದಲ್ಲಿ  ರೋಡ್ ಶೋ ಮೂಲಕ ಪ್ರಜ್ವಲ್ ಮತ ಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಿಮ್ಮ ಸಮಸ್ಯೆ ಆಲಿಸಿ ದೆಹಲಿಯಲ್ಲಿ ಭಾಷಣ ಮಾಡುವೇ. ದೆಹಲಿಯಲ್ಲಿ ಪ್ರಧಾನಿಯಾದವರಿಗೆ ನಮ್ಮ ಕಷ್ಟ-ಸುಖ ಅರಿವಾಗೋದಿಲ್ಲ. ಆ ಕಾರಣಕ್ಕೆ ಮೋದಿ‌ ಹೆಸರಿನಲ್ಲಿ ಯಾರು ಮಾತ ಹಾಕೋದು ಬೇಡ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸೋರಿಗೆ ಮತಹಾಕಿ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಇನ್ನು ಹಾಸನ ತಾಲೂಕಿನ ಹಳ್ಳಿ ಹಳ್ಳಿಗೆ ತೆರಳಿ, ಸೂರಜ್ ರೇವಣ್ಣ, ಪ್ರಜ್ವಲ್​ ಪರ ಮತಯಾಚನೆ ಮಾಡುತ್ತಿದ್ದು, ಶಾಂತಿಗ್ರಾಮದ ಸೌಮ್ಯಕೇಶವನಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪ್ರಚಾರ ಆರಂಭಿಸಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv