ಮೋದಿನ ಹೊಗಳಿದ್ದಕ್ಕೆ ಪೇದೆ ಸಸ್ಪೆಂಡ್​…!

ಹಾವೇರಿ: ಫೇಸ್​ಬುಕ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಕ್ಕಾಗಿ ರಾಣೆಬೆನ್ನೂರು ಟೌನ್ ಠಾಣೆಯ ಹೆಡ್ ಕಾನ್​ಸ್ಟೇಬಲ್​ನನ್ನು ಅಮಾನತು ಮಾಡಲಾಗಿದೆ. ಜಯಂತ್ ಬಳಿಗಾರ್ ಅಮಾನತ್ತಾದ ಕಾನ್​ಸ್ಟೇಬಲ್ ಆಗಿದ್ದಾರೆ. ಇವರು ಮೋದಿ ಪರವಾಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ ಹಾರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟೇಟಸ್​ ಹಾಕಿರುವ ಬಳಿಗಾರ್​, ಈ ಸಂಬಂಧ ಕ್ರಮ ಕೈಗೊಂಡಿದ್ದಕ್ಕೆ ಮೋದಿಯನ್ನ ಹೊಗಳಿದ್ದರು. ಈ ಸಂಬಂಧ ಹಾವೇರಿ ಎಸ್​ಪಿ ಪರಶುರಾಮ್, ಕೆ. ಜಯಂತ್​ ಬಳಿಗಾರ್​ರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv