₹90 ಸಾವಿರ ಕೋಟಿ ಗಡಿ ದಾಟಲಿದೆ ಜನ್​ಧನ್ ಖಾತೆಯ ಡೆಪಾಸಿಟ್..!

ದೆಹಲಿ: ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರಬೇಕು. ಅದರಲ್ಲಿ ಹಣವೂ ಇರಬೇಕು ಅನ್ನೋ ಉದ್ದೇಶದಿಂದ ಜಾರಿಗೆ ತಂದ ಯೋಜನೆ ಪ್ರಧಾನ ಮಂತ್ರಿ ಜನ ಧನ ಯೋಜನೆ. ಯೋಜನೆ ಜಾರಿಗೆ ಬರ್ತಿದ್ದಂತೆ ಕೋಟಿ ಕೋಟಿ ಬ್ಯಾಂಕ್ ಖಾತೆಗಳು ಹೊಸದಾಗಿ ಓಪನ್ ಆಗಿದ್ವು.
ಇದೀಗ ಜನ್​ಧನ್ ಅಕೌಂಟ್​ಗಳಲ್ಲಿ ಆಗ್ತಿರುವ ಡೆಪಾಸಿಟ್ ಮೊತ್ತ ಶೀಘ್ರದಲ್ಲೇ 90 ಸಾವಿರ ಕೋಟಿಯ ಗಡಿ ದಾಟುವ ನಿರೀಕ್ಷೆ ಇದೆ. ಸರ್ಕಾರ ಜನ್​ಧನ್ ಖಾತೆ ತೆರಯುವವರಿಗೆ ಅಪಘಾತ ವಿಮೆಯನ್ನ ನೀಡುತ್ತೆ. ಈ ಮೊತ್ತವನ್ನ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು, ಇದೇ ಕಾರಣಕ್ಕೆ ಜನ್​ಧನ್ ಖಾತೆಗಳ ಸಂಖ್ಯೆಯೂ ಹೆಚ್ಚಾಗಿದೆ, ಜೊತೆಗೆ ಅದರಲ್ಲಿ ಇಡುತ್ತಿರುವ ಹಣದ ಮೊತ್ತವೂ ಹೆಚ್ಚುತ್ತಿದೆ ಅಂತ ಕೇಂದ್ರ ಹಣಕಾಸು ಸಚಿವಾಲಯದ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಜನವರಿ 23ರವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜನ್​ಧನ್ ಅಕೌಂಟ್​ನಲ್ಲಿ ಒಟ್ಟು 88,566.92 ಕೋಟಿ ರೂಪಾಯಿ ಡೆಪಾಸಿಟ್ ಮಾಡಲಾಗಿದೆ. ಇನ್ನು, ಇಲ್ಲಿವರೆಗೂ ಜನ್​ಧನ್ ಯೋಜನೆಯಡಿ ಒಟ್ಟು 34.14 ಖಾತೆಗಳನ್ನ ತೆರೆಯಲಾಗಿದೆ. ಇದರಲ್ಲಿ ಶೇಕಡ 53ರಷ್ಟು ಮಹಿಳೆಯರಿದ್ದಾರೆ ಹಾಗೂ ಶೇಕಡ 59ರಷ್ಟು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳ ಜನ ಖಾತೆಗಳನ್ನ ತೆರೆದಿದ್ದಾರೆ.

 

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv