ಪ್ರಭಾಸ್​, ಶ್ರದ್ಧಾ ಕಪೂರ್ ಫೋಟೋ ಲೀಕ್​..!

ಬಾಹುಬಲಿ ಚಿತ್ರದ ಭರ್ಜರಿ ಯಶಸ್ಸಿನ ನಂತರ ‘ಸಾಹೋ’ ಆಗಿ ತೆರೆ ಮೇಲೆ ಬರಲು ನಟ ಪ್ರಭಾಸ್ ಭರ್ಜರಿ ಸಿದ್ಧತೆ ನಡೆಸ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್, ಪ್ರಭಾಸ್​​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಶ್ರದ್ಧಾ ಹಾಗೂ ಪ್ರಭಾಸ್ ಒಟ್ಟಿಗೆ ನಟಿಸುತ್ತಿದ್ದು, ಇಬ್ಬರ ಕಾಂಬಿನೇಷನ್ ಬಗ್ಗೆ ಈಗಾಗಲೇ ಅಭಿಮಾನಿ​ಗಳಲ್ಲಿ ಸಖತ್ ಕುತೂಹಲ ಸೃಷ್ಟಿಯಾಗಿದೆ.  ಈಗ ಚಿತ್ರದ ಕೆಲವು ರೊಮ್ಯಾಂಟಿಕ್ ದೃಶ್ಯದ ಫೋಟೋಗಳು ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರೋ ಫೋಟೋದಲ್ಲಿ ಶ್ರದ್ಧಾ ಕಪೂರ್ ಪಿಂಕ್ ಬಣ್ಣದ ಡ್ರೆಸ್​ನಲ್ಲಿ ಕಂಗೊಳಿಸ್ತಿದ್ರೆ, ಪ್ರಭಾಸ್ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ. ಸುಮಾರು 300 ಕೋಟಿ ರೂಪಾಯಿ ಬಜೆಟ್​​ನಲ್ಲಿ ತಯಾರಾಗಿರೋ ಸಾಹೋ ಚಿತ್ರ ಆಗಸ್ಟ್ 15 ರಂದು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್​ ಆಗಲಿದೆ. ನಟ ನೀಲ್ ನಿತಿನ್ ಮುಖೇಶ್, ಅರುಣ್ ವಿಜಯ್ ಸೇರಿದಂತೆ ಮತ್ತಿತರರು ಸಾಹೋದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.