ಪ್ರಹ್ಲಾದ್ ಜೋಶಿ, ಶಿವಕುಮಾರ್ ಉದಾಸಿ ನೂರಕ್ಕೆ ನೂರು ಗೆಲ್ಲುತ್ತಾರೆ: ಪ್ರಭಾಕರ್ ಕೋರೆ

ಹುಬ್ಬಳ್ಳಿ: ನಮ್ಮ ಪಕ್ಷದ ಅಭ್ಯರ್ಥಿಗಳಾದ ಪ್ರಲ್ಹಾದ ಜೋಶಿ, ಶಿವಕುಮಾರ್ ಉದಾಸಿಯವರು ನೂರಕ್ಕೆ ನೂರು ಗೆಲ್ಲುತ್ತಾರೆ. ಯುವ ಸಮುದಾಯ ಮೋದಿಯವರ ನಾಯಕತ್ವ ಮೆಚ್ಚಿಕೊಂಡಿದ್ದಾರೆ.  ಎಂದು ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚಿಕ್ಕೋಡಿ ಕ್ಷೇತ್ರದಲ್ಲಿ ಸೋಲಾಗಿತ್ತು. ಈ ಬಾರಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ಕುರಿಸುವ ಮನಸ್ಸು ಹೊಂದಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕದ ಏಳು ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಿಗೆ ಚುನಾವಣೆ ಪ್ರಚಾರಕ್ಕಾಗಿ ಪ್ರವಾಸ ಮಾಡಿದ್ದೇನೆ. ನಾನು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಸಭೆ ಮಾಡಿದ್ದೇನೆ. ಅದರಲ್ಲಿ‌ ಎಲ್ಲರೂ ಪ್ರಲ್ಹಾದ್ ಜೋಶಿಯರಿಗೆ ಬೆಂಬಲ‌ ನೀಡುತ್ತಿದ್ದಾರೆ ಎಂದು ಪ್ರಭಾಕರ್ ಕೋರೆ ಹೇಳಿದರು.

ಕೇಂದ್ರ ಸರ್ಕಾರದ ಹಲಾವರು ಯೋಜನೆಗಳಿಂದ ಉದ್ಯೋಗ ಸೃಷ್ಟಿ ಆಗಿವೆ. ಖಾಸಗಿ ವಲಯದಲ್ಲಿ ಹಾಗೂ ಸರ್ಕಾರಿ ವಲಯದಲ್ಲಿ  ಉದ್ಯೋಗ ಸೃಷ್ಟಿ ಆಗಿವೆ. ಜಾತಿ ಮುಂದೇ ಇಟ್ಟುಕೊಂಡು ಓಟ್ ಕೇಳುವುದು ತಪ್ಪು. ಲಿಂಗಾಯಿತರು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಬಸವಣ್ಣನವರನ್ನು ಜಗತ್ತಿಗೆ‌ ಮುಟ್ಟಿಸಿದ ಕೀರ್ತಿ ಈಗಿನ ಫ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ. ಬಸವಣ್ಣನವರ ಒಂದೇ ಧರ್ಮಕ್ಕೆ ಸೀಮಿತವಾಗಿರಲಿಲ್ಲ.  ಲಿಂಗಾಯತ ಮುಖಂಡರಿಗೆ ಎಷ್ಟು ಮಂತ್ರಿ ಸ್ಥಾನ? ಕಾಂಗ್ರೆಸ್‌ನವರು ನೀಡಿದ್ದಾರೆ. ಇದನ್ನು ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಲಿ. ನಾವು ಜಾತಿ ಆಧಾರದ ಮೇಲೆ ಓಟ್ ಕೇಳುತ್ತಿಲ್ಲ. ದೇಶದ ವಿಕಾಸಕ್ಕೆ ಒತ್ತು ನೀಡಿದವರ ಮೇಲೆ ಓಟ್ ಕೇಳುತ್ತಿದ್ದೇವೆ. ನನ್ನ ಜಾತಿಯನ್ನು ನಾನು ಎಂದು ರಾಜಕೀಯವಾಗಿ ಉಪಯೋಗಿಸಿಲ್ಲ. ಕೆಲವರು ಸ್ವಾರ್ಥಕ್ಕಾಗಿ ಜಾತಿಯ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಭಾಕರ್ ಕೋರೆ ಆರೋಪಿಸಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv