ಬೇಸಿಗೆಯಲ್ಲಿ ಕಾಮನ್​ ಆದ ಚರ್ಮದ ಸಮಸ್ಯೆಗಳಿಗೆ ಹೇಳಿ ಗುಡ್​ ಬಾಯಿ

ಬೇಸಿಗೆ ಬಂತು ಅಂದ್ರೆ ಸಾಕು ಸಾಕಷ್ಟು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಱಶಸ್​​, ಫಂಗಸ್​ ಇನ್​ಫೆಕ್ಷನ್ಸ್​ನಂತಹ ಸಮಸ್ಯೆಗಳು ಹೆಚ್ಚಾಗಿ ನಮ್ಮನ್ನ ಕಾಡುತ್ತಿರುತ್ತದೆ. ಇನ್ನು ಆಯ್ಲಿ ಸ್ಕಿನ್​ ಪ್ರಾಬ್ಲಂ ಕೂಡ ಬೇಸಿಗೆಯಲ್ಲೇ ಹೆಚ್ಚಾಗಿ ಕಂಡು ಬರುವುದರಿಂದ ಮೊಡವೆ ಸಮಸ್ಯೆಗಳು ಕೂಡಾ ಹೆಚ್ಚಾಗಿರುತ್ತದೆ. ಹಾಗಾದ್ರೆ ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಹೇಗಿರಬೇಕು. ಇಲ್ಲಿದೆ ಸಲ್ಯೂಷನ್​

1. ಮೊಡವೆ: ಬೇಸಿಗೆಯಲ್ಲಿ, ಸಾಮಾನ್ಯವಾಗಿ ಹೆಚ್ಚಾಗಿ ಬೆವರುತ್ತೇವೆ. ಇದು ಚರ್ಮದ ಮೇಲೆ ಮೊಡವೆಗಳು, ಱಶಸ್​ ಉಂಟಾಗಲು ಕಾರಣವಾಗುತ್ತದೆ. ಬೆವರಿನಿಂದ ಉಂಟಾಗುವ ಬ್ಯಾಕ್ಟೀರಿಯಾ, ಚರ್ಮದ ಎಣ್ಣೆಯಾಂಶದೊಂದಿಗೆ ಬೆರೆತು ಮೊಡವೆಯ ರಂಧ್ರಗಳು ಕಟ್ಟಿಕೊಳ್ಳಲು ಕಾರಣವಾಗುತ್ತದೆ. ಇದರಿಂದ ಮೊಡವೆ ಸಮಸ್ಯೆಗಳು ಹೆಚ್ಚಾಗುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ಆಗಾಗ ಮುಖ ತೊಳೆದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ. ಬೆವರನ್ನ ಬೆರೆಸಿದ ಖರ್ಚಿಫ್​ ಅನ್ನ ಮತ್ತೆ ಬಳಸದಿರಿ. ಕಡಲೆ ಹಿಟ್ಟು ಮತ್ತು ಹಾಲನ್ನ ಸೇರಿಸಿ, ಮುಖಕ್ಕೆ ಮಾಸ್ಕ್​ ಹಾಕಿ, ಒಣಗಿದ ನಂತರ ತೊಳೆದುಕೊಳ್ಳಿ. ಇದು ನಿಮ್ಮ ಚರ್ಮದಲ್ಲಿನ ಜಿಡ್ಡಿನಾಂಶ ತೆಗೆದು ಮೊಡವೆಗಳು ಮೂಡದಂತೆ ಸಹಾಯ ಮಾಡುತ್ತದೆ.

2. ಆಯ್ಲಿ ಸ್ಕಿನ್​: ಸೂರ್ಯನ UV ಕಿರಣಗಳು ಮತ್ತು ಬಿಸಿಲಿನ ಶಾಖ ಹೆಚ್ಚು ಆಯ್ಲಿ ಸ್ಕಿನ್​ ಉಂಟಾಗಲು ಕಾರಣವಾಗಬಹುದು. ಈ ಎಣ್ಣೆಯುಕ್ತ ಚರ್ಮ ಮೊಡವೆಗಳಿಗೆ ಕಾರಣವಾಗುತ್ತದೆ. ಮೊಟ್ಟೆಯ ಬಿಳಿಭಾಗಕ್ಕೆ ತಣ್ಣನೆಯ ಹಾಲು, ಅಲೋವೆರಾವನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಅಯ್ಲಿ ಸ್ಕಿನ್​ನಿಂದ ಪರಿಹಾರ ಪಡೆಯಬಹುದು.

3. ಸನ್​ಬರ್ನ್ಸ್: ಇದು ಬೇಸಿಗೆಯಲ್ಲಿ ಉಂಟಾಗುವ ಸಾಮಾನ್ಯವಾದ ಸಮಸ್ಯೆ. ಸೂರ್ಯ UVA ಮತ್ತು UVB ಕಿರಣಗಳು ನಿಮ್ಮ ಚರ್ಮಕ್ಕೆ ಹಾನಿಯನ್ನ ಉಂಟುಮಾಡುವುದರ ಜೊತೆಗೆ ಉಂಟಾಗಲು ಕಾರಣವಾಗಬಹುದು. ಆದ್ದರಿಂದ ಕಡಿಮೆ ಕೆಮಿಕಲ್​ ಇರು ಸನ್​ಸ್ಕ್ರೀನ್​ಗಳನ್ನ ತಪ್ಪದೇ ಬಳಸಿ. ಇನ್ನು ಸನ್​ಬರ್ನ್​ ಆದ ಜಾಗಕ್ಕೆ ನೀವು ತಂಪಾದ ಹಾಲನ್ನು ಹಚ್ಚಿಕೊಳ್ಳಬಹುದು. ಸನ್​ಟ್ಯಾನ್​ ತೆಗೆದುಹಾಕಲು ಮೊಸರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೌತೆಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ನೋವು ನಿವಾರಕ ಗುಣಲಕ್ಷಣಗಳಿವೆ. ಇದು ನಿಮ್ಮ ಚರ್ಮಕ್ಕೆ ಹಿತಕರವಾದ ಅನುಭವವನ್ನ ನೀಡುತ್ತದೆ.

4. ಬೆವರಿನ ದುರ್ವಾಸನೆ: ಕೆಲವರು ಸ್ವಲ್ಪ ಬೆವೆತರೂ ಕೆಟ್ಟ ವಾಸನೆ ಬರುತ್ತದೆ. ಇಂತಹ ಸಮಸ್ಯೆಯನ್ನ ಎದುರಿಸುವವರು ಸಾಕಷ್ಟು ನೀರು ಸೇವಿಸುವುದು ಒಳಿತು. ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ಸ್ನಾನ ಮಾಡಿ, ಸ್ನಾನದ ನಂತರ ಟಾಲ್ಕುಮ್ ಪೌಡರ್​ ಅನ್ನ ಬಳಸಬಹುದು.

5. ಫಂಗಲ್​ ಇನ್​ಫೆಕ್ಷನ್ಸ್​: ಫಂಗಲ್​ ಇನಫೆಕ್ಷನ್ಸ್​ ಬೇಸಿಗೆಯಲ್ಲಿ ಕಾಡುವ ಸಾಮಾನ್ಯವಾಗಿ ಸಮಸ್ಯೆ, ಫಂಗಸ್​ಗಳು ಚರ್ಮದ ಮೇಲ್ಪದರದ ಮೇಲೆ ಬೆಳವಣಿಗೆಯಾಗಿ, ತೇವಾಂಶವಿರುವ ಮತ್ತು ಬೆಚ್ಚಗಿನ ಪರಿಸರದಲ್ಲಿ ಕಾಲು ಅಥವಾ ತೊಡೆಗಳ ಸಂದುಗಳಲ್ಲಿ ಬೆಳೆಯುತ್ತದೆ. ಶಾಖದ ತೀವ್ರತೆ ಹೆಚ್ಚಾದಷ್ಟು ಫಂಗಸ್​ಗಳು ವೇಗವಾಗಿ ಬೆಳೆಯುತ್ತದೆ. ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಚರ್ಮದ ಸಮಸ್ಯೆ ಹೆಚ್ಚಾಗಬಹುದು. ಇದಕ್ಕಾಗಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ತೆಳುವಾದ ಕಾಟನ್​ ಬಟ್ಟೆಗಳನ್ನ ಬಳಸಿ, ಮತ್ತು ಹೊರಗಡೆ ಹೋಗಿ ಬಂದ ನಂತರ ತಪ್ಪದೇ ಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv