ಕೆಡಿಪಿ ಸಭೆಯಲ್ಲಿ ಅಶ್ಲೀಲ ವೆಬ್​​ಸೈಟ್​ ವೀಕ್ಷಣೆ..!

ಧಾರವಾಡ: ಕೆಡಿಪಿ ಸಭೆ ಕಾಟಾಚಾರಕ್ಕೆ ನಡೆಯುತ್ತೆ ಅನ್ನೋದು ಮೊದಲಿನಿಂದಲೂ ತಿಳಿದಿರೋ ವಿಚಾರ. ಸಭೆಗೆ ಬರೋ ಅಧಿಕಾರಿಗಳು ಮೊಬೈಲ್‌ನಲ್ಲಿಯೇ ಮುಳುಗಿರ್ತಾರೆ ಅನ್ನೋದು ಹೊಸದೇನಲ್ಲ ಬಿಡಿ. ಆದ್ರೆ, ಧಾರವಾಡ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಎಇಇ ಲಕ್ಷ್ಮಣ ನಾಯ್ಕ್ ಅಶ್ಲೀಲ ವೆಬ್​​ಸೈಟ್​ ವೀಕ್ಷಣೆ ಮಾಡಿ ಸುದ್ದಿಯಾಗಿದ್ದಾರೆ.
ಇವರಷ್ಟೇ ಅಲ್ಲ, ಬಹುತೇಕ ಅಧಿಕಾರಿಗಳು ಫೇಸ್​ಬುಕ್, ವಾಟ್ಸಾಪ್​ನಲ್ಲಿ ಬ್ಯುಸಿಯಾಗಿದ್ರು. ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ನೆಲವಗಿ ಆನ್​ಲೈನ್​ ಶಾಪಿಂಗ್​ನಲ್ಲಿ ತಲ್ಲೀನರಾಗಿದ್ದರು. ಜಿಲ್ಲೆಯ ಜ್ವಸಲಂತ ಸಮಸ್ಯೆಗಳ ಕುರಿತು ಗಹನವಾದ ಚರ್ಚೆ ನಡೆಸಬೇಕಾದ ಅಧಿಕಾರಿಗಳೇ ಈ ರೀತಿ ಮಾಡಿದರೆ, ಸಮಸ್ಯೆಗಳಿಗೆ ಪರಿಹಾರ ಹೇಗೆ ಸಾಧ್ಯವಾದೀತು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv