ಅಯ್ಯಯ್ಯೋ..! ನನ್ನ ಹೆಂಡತಿನೇ ಆ ನೀಲಿ ತಾರೆ ಎಂದುಕೊಂಡ ಪಾರ್ನ್ ಅಡಿಕ್ಟ್ ಮಾಡಿದ್ದೇನು..?!

ನೀವು.. ಅದೆಷ್ಟೋ ಕತೆಗಳನ್ನ ಕೇಳಿರ್ತಿರಾ. ಪಂಚತಂತ್ರ ಕತೆ, ಫೇರಿ ಟೇಲ್​ ಕತೆ, ಚಂದಮಾಮ ಕತೆಗಳನ್ನ ಕೇಳಿ, ಕಲ್ಪನೆ ಮಾಡಿಕೊಳ್ತಿದ್ವಿ. ಆದ್ರೆ ಈಗ ನಾವು ಹೇಳೋ ಕತೆ, ನಿಜ ಜೀವನದಲ್ಲಿ ನಡೆದಿರೋದು. ಹೌದೂ ಇದು ‘‘ಕತೆಯಲ್ಲ ಜೀವನ’’. ಈಗ ನಾವು ಹೇಳೋ ಈ ಕತೆನ ನೀವು ಕೇಳಿದ್ರೆ, ಒಂದ್​ ಕ್ಷಣ ತಬ್ಬಿಬ್ಬಾಗ್ಬಿಡ್ತೀರಾ. ಜೀವನದಲ್ಲಿ ಹಿಂಗೂ ನಡೆಯುತ್ತಾ ಅನ್ನೋ ಕ್ವೆಶ್ಚನ್ ಮಾರ್ಕ್​ ಮೂಡುತ್ತೆ. ಯಾಕಂದ್ರೆ ಕಂಪ್ಯೂಟರ್​​ನಲ್ಲೋ, ವೆಬ್​ಸೈಟ್​ನಲ್ಲೋ ಕಂಡವರ ಕಾಮಕೇಳಿ ನೋಡುತ್ತಾ..ನೋಡುತ್ತಾ ತನ್ನನ್ನೇ ತಾನು ಮರೆತು, ಆಗಬಾರದ್ದು ಆಗಿಬಿಡುತ್ತವೆ. ಅಂಥದ್ದೊಂದು ಘಟನೆ ಇಲ್ಲೇ ಬೆಂಗಳೂರಿನಲ್ಲೇ ನಡೆದಿದ್ದು, ನಂದನದಂತಿದ್ದ ಸಂಸಾರ ನರಕವಾಗಿಬಿಟ್ಟಿದೆ. ಪಾರ್ನ್​ ಚಿತ್ರದಲ್ಲಿ ಕಂಡ ನಟಿ ಬೇರೆಯಾರೂ ಅಲ್ಲ ನನ್ನ ಪತ್ನಿಯೇ ಅಂತಾ ಅಂದುಕೊಂಡು ಈ ಆಸಾಮಿ ಫಜೀತಿ ಮಾಡಿಕೊಂಡು ಬಿಟ್ಟಿದ್ದಾನೆ.

ಅಷ್ಟಕ್ಕೂ ಆಗಿದ್ದು ಏನೆಂದ್ರೆ, ಅದೊಂದು ಚೆಂದದ ಕುಟುಂಬ. 6 ವರ್ಷದ ಹಿಂದೆ ಈ ಜೋಡಿ ಮದುವೆಯಾಗಿತ್ತು. 37 ವರ್ಷದ ಪತಿ, 31 ವರ್ಷದ ಪತ್ನಿಯ ಪ್ರೀತಿಗೆ ಸಾಕ್ಷಿಯಾಗಿ ಒಂದು ಮುದ್ದಾದ ಮಗು ಜನಿಸಿತ್ತು. ಗಂಡ, ಹೆಂಡತಿ, ಒಂದು ಮಗು ಎಲ್ಲವೂ ಚೆನ್ನಾಗೇ ನಡೀತಿತ್ತು. ಆದ್ರೇ, ತಿಳಿ ನೀರಿನಂತಿದ್ದ ಕುಟುಂಬವನ್ನ ಕಲಕಿದ್ದು ಒಂದೇ ಒಂದು ಪಾರ್ನ್​ ವಿಡಿಯೋ. ಹೌದು, ಈ ಕುಟುಂಬದ ಯಜಮಾನನಿಗೆ ಪಾರ್ನ್ ನೋಡೋ ಹುಚ್ಚಿತ್ತು. ಪ್ರತೀ ದಿನ ಆತ ಪಾರ್ನ್ ನೋಡ್ತಾನೆ ಇದ್ದ. ಒಂದು ದಿನ ಎಂದಿನಂತೆ ಪಾರ್ನ್​ ನೋಡ್ತಿರ್ಬೇಕಾದ್ರೆ, ಅವನ ಕಣ್ಣಿಗೆ ಆ ನೀಲಿ ತಾರೆ, ತಾನು ಕಟ್ಟಿಕೊಂಡ ಹೆಂಡತಿಯಂತೆ ಕಂಡಿದ್ದಾಳೆ. ನನ್‌ ಹೆಂಡ್ತಿ ಬೇರೆ ಗಂಡಸಿನ ಜೊತೆ ಈ ರೀತಿ ವಿಡಿಯೋ ಮಾಡಿದ್ದಾಳೆ ಎಂದು ಊಹಿಸಿ, ಸೀದಾ ಅವನ ಹೆಂಡತಿಯನ್ನ ಕರೆದುಕೊಂಡು ಹೆಚ್​ಎಎಲ್​ ಪೊಲೀಸ್​ ಸ್ಟೇಷನ್​ಗೆ ಕಂಪ್ಲೇಂಟ್​ ಕೊಡೋದಕ್ಕೆ ಹೊರಡುತ್ತಾನೆ. ಜೊತೆಗೆ ಸಾಕ್ಷಿಯಂತೆ ಅವನು ನೋಡಿದ ಆ ಪಾರ್ನ್​ ವಿಡಿಯೋವನ್ನೂ ತೆಗೆದುಕೊಂಡು ಹೋಗಿ ಪೊಲೀಸರ ಮುಂದಿಟ್ಟ.

ಆ ವಿಡಿಯೋವನ್ನ ನೋಡಿದ ಪೊಲೀಸರು, ಆ ಯಜಮಾನನಿಗೆ, ನೋಡಪ್ಪ ಇದು ನಿನ್ನ ಹೆಂಡತಿಯಲ್ಲ, ಈ ವಿಡಿಯೋ ವಿದೇಶದಲ್ಲಿ ಚಿತ್ರಿಸಿರೋದು, ಇದು ಭಾರತ ದೇಶದಲ್ಲಲ್ಲ ಎಂದು ಬಿಡಿಸಿ ಹೇಳಿದ್ರೂ ಅವನು ಕೇಳಲೇ ಇಲ್ಲ. ಇಲ್ಲಾ ಸಾರ್​! ಇದು ನನ್ನ ಹೆಂಡತಿನೇ, ಯಾಕಂದ್ರೆ ನನ್ನ ಹೆಂಡತಿಗಿರೋ ಮಚ್ಚೆ ಈ ವಿಡಿಯೋದಲ್ಲಿ ಕಾಣ್ತಾ ಇದೆ, ಇದು ನನ್ನ ಹೆಂಡತಿನೇ ಎಂದು ವಾದಿಸಿದ. ನನಗೆ ಆ ಗಂಡ್ಸು ಬೇಕು, ಅವನನ್ನ ನನಗೆ ಹುಡುಕಿಕೊಡಿ ಎಂದು ಹಠ ಮಾಡಿ ಪೊಲೀಸ್​ ಠಾಣೆಯಲ್ಲೆ ಕುತ್ಕೊಳ್ತಾನೆ. ಇದನ್ನೆಲ್ಲಾ ಕೇಳಿದ ಪೊಲೀಸರು ಆ ಯಜಮಾನನಿಗೆ, ನೀನು ನಿಮ್ಹಾನ್ಸ್​ಗೆ ಹೋಗ್ಬೇಕು, ಯಾಕಂದ್ರೆ, ನಿನಗೆ ಈ ಪಾರ್ನ್​ ಜಾಸ್ತಿ ನೋಡೋದ್ರಿಂದ ಮಾನಸಿಕ ಅಸ್ವಸ್ಥತೆ ಉಂಟಾಗಿದೆ ಎಂದು ಆತನನ್ನ ಕೌನ್ಸಿಲರ್​ ಬಳಿ ಕಳುಹಿಸುತ್ತಾರೆ. ಯಾವಾಗ ಅವನಿಗೆ ನೀನು ಕೌನ್ಸಿಲರ್​ನ ಮೀಟ್​ ಮಾಡ್ಬೇಕು ಅನ್ನೋ ಮಾತು ಹೇಳಿದ್ರೋ ಆತ ಕೋಪಗೊಂಡು, ನನ್ನ ಹೆಂಡ್ತಿ ಮೇಲೆ ಕಂಪ್ಲೇಂಟ್​ ಕೊಡೋದಕ್ಕೆ ಬಂದ್ರೇ ನನ್ನನ್ನೇ ಹುಚ್ಚ ಅಂದ್ರಾ ಅಂತ ಗಲಾಟೆ ಮಾಡಿದ್ದಾನೆ. ವಿಪರ್ಯಾಸ ಅಂದ್ರೆ ಅವನ ಹೆಂಡತಿ ನಾಲ್ಕು ತಿಂಗಳ ಗರ್ಭಿಣಿ. ಈ ಅಪವಾದವನ್ನ ಸಹಿಸಲಾರದೆ ಆಕೆ, ಗಂಡನಿಂದ ದೂರಾಗಿ ಮನೆ ಬಿಟ್ಟು ತವರು ಸೇರಿದ್ದಾಳೆ.