ಮುಸ್ಲಿಮರು ವೋಟ್​ ಮಾಡದಿದ್ರೂ ಕೆಲಸ ಮಾಡ್ತೀನಿ: ವರುಣ್ ಗಾಂಧಿ

ದೆಹಲಿ: ಮನೇಕಾ ಗಾಂಧಿ ಇತ್ತೀಚೆಗೆ ತಾವಾಗಲೇ ಎಲೆಕ್ಷನ್​ನಲ್ಲಿ ಗೆದ್ದಾಗಿದ್ದು, ತಮಗೆ ಮುಸ್ಲಿಮರು ವೋಟ್​ ಹಾಕೋದು ಬಿಡೋದು ಅವರಿಗೆ ಸೇರಿದ್ದು, ಒಂದು ವೇಳೆ ವೋಟ್​ ಹಾಕದಿದ್ದರೇ ನಿಮ್ಮ ಕೆಲಸಗಳನ್ನು ಮಾಡಿಕೊಡುವಾಗ ಯೋಚನೆ ಮಾಡಬೇಕಾಗುತ್ತದೆ ಎಂದಿದ್ರು. ಆದರೆ ಇದೀಗ ಮನೇಕಾ ಗಾಂಧಿಯ ಪುತ್ರ ವರುಣ್ ಗಾಂಧಿ ಮುಸ್ಲಿಮರು ನನಗೆ ವೋಟ್​ ಹಾಕದಿದ್ದರೂ ನಾನು ಅವರ ಕೆಲಸ ಕಾರ್ಯಗಳನ್ನು ಮಾಡಿಸಿಕೊಡುವೆ ಎಂದಿದ್ದಾರೆ.

ತಮ್ಮ ಕ್ಷೇತ್ರ ಫಿಲಿಬಿಟ್​ನಲ್ಲಿ ಮಾತನಾಡಿದ ಅವರು, ಮುಸ್ಲಿಮರು ನನಗೆ ವೋಟ್​ ಹಾಕಿದರೆ ಸಂತೋಷ ಪಡುತ್ತೇನೆ. ಒಂದು ವೇಳೆ ವೋಟ್ ಹಾಕದಿದ್ದರೂ ನಾನು ಅವರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದಿದ್ದಾರೆ. ಕಳೆದ ಬಾರಿ ಮನೇಕಾ ಗಾಂಧಿ ನೀಡಿದ್ದ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್​ ಕಳುಹಿಸಿತ್ತು. ಅಲ್ಲದೇ 48 ಗಂಟೆ ಮನೇಕಾ ಗಾಂಧಿಯವರ ಚುನಾವಣಾ ಚಟುವಟಿಕೆಗಳಿಗೆ ನಿಷೇಧ ಹೇರಿತ್ತು.