ರಿಲ್ಯಾಕ್ಸ್​ ಮೂಡ್​ನಲ್ಲಿ ಕರಡಿ ಸಂಗಣ್ಣ, ರಾಜಶೇಖರ್ ಹಿಟ್ನಾಳ್..!

ಕೊಪ್ಪಳ: ಲೋಕಸಭಾ ಚುನಾವಣೆ ಮುಗಿದಿದ್ದು,  ಸದ್ಯ ಅಭ್ಯರ್ಥಿಗಳು ಸದ್ಯ ರಿಲ್ಯಾಕ್ಸ್ ಮೂಡಲಿದ್ದಾರೆ. ಕಳೆದ ಒಂದು ತಿಂಗಳಿಂದ ಬ್ಯುಸಿಯಾಗಿದ್ದ ಅಭ್ಯರ್ಥಿಗಳು ಮೇ23 ರಂದು ಬರುವ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಬೆಳಿಗ್ಗೆ ಒಂದಿಷ್ಟು ಯೋಗ ವ್ಯಾಯಾಮ ಮಾಡಿ ಕುಟುಂಬದ ಜೊತೆ ಕಾಲಕಾಳೆದರು. ಅಲ್ಲದೆ, ಮನೆಗೆ ಬಂದ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಎಲೆಕ್ಷನ್ ಮಗಿದ ಹಿನ್ನೆಲೆ ಒಂದಿಷ್ಟು ನಿದ್ದೆಗೆ ಜಾರಿದ್ದಾರೆ. ಯಾವ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ. ಇಬ್ಬರೂ ಅಭ್ಯರ್ಥಿಗಳು ಸಹ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ನೀರಿಕ್ಷೆ  ಹೊಂದಿದ್ದಾರೆ. ಇನ್ನು ಸಂಗಣ್ಣ ಕರಡಿ ಮಾಧ್ಯಮಗಳೊಂದಿಗೆ ಮಾತನಾಡಿ, ಮತದಾರರು ನನಗೆ ಒಳ್ಳೆ ರೀತಿ ಆಶೀರ್ವಾದ ನೀಡಿದ್ದಾರೆ. ನನ್ನ ಗೆಲವು ಖಚಿತ ಅಂತ ಹೇಳಿದರು. ಇನ್ನು ರಾಜಶೇಖರ್ ಹಿಟ್ನಾಳ ಇಲ್ಲಿ ಯಾವುದೇ ಮೋದಿ ಅಲೆ ಇಲ್ಲ. ಐದು ವರ್ಷ ಅವರ ಸುಳ್ಳಿನ ಭರವಸೆಗಳನ್ನು‌ ಜನರು ನೋಡಿದ್ದಾರೆ. ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಗೆಲವು ಖಚಿತ ಅಂತ ಹೇಳಿದರು. ಇನ್ನು‌ ಶಾಂತಿಯುತ ಮತದಾನವಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಮತಯಂತ್ರಗಳು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಭದ್ರತೆಯಲ್ಲಿ ಇರಿಸಲಾಗಿದೆ. ಇನ್ನು ಮೇ 23 ಕ್ಕೆ ಮತದಾರರು ಅಭ್ಯರ್ಥಿಗಳ ಹಣೆಬರಹ ಹೇಳಲಿದ್ದಾರೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv