ಗೂಬೆಗಳಿಗಾಗಿ ಮುಗಿ ಬಿದ್ರು ರಾಜಕಾರಣಿಗಳು..! ಏನ್ ಡಿಮ್ಯಾಂಡ್ ಗೊತ್ತಾ?

ಚಾಮರಾಜನಗರ: ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಅಖಾಡಕ್ಕೆ ಧುಮುಕುವ ಅಭ್ಯರ್ಥಿಗಳು ಗೆಲುವಿಗಾಗಿ ದೇವರ ಮೊರೆ ಹೋಗುವುದು, ನಾನಾ ಪೂಜಾ-ಪುನಸ್ಕಾರ ಮಾಡಿಸೋದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಗೂಬೆ ಖರೀದಿಸಿದ್ರೆ ಅದೃಷ್ಟ ಖುಲಾಯಿಸುತ್ತದೆ ಎಂದು ಕೆಲ ರಾಜಕಾರಣಿಗಳು ಗೂಬೆಯನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕೊಳ್ಳೇಗಾಲದ ತಾಲೂಕಿನ ಸೂಳೆಕೋಬೆಯಲ್ಲಿ ಗೂಬೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದರು.  ಬಂಧಿತ ಆರೋಪಿಗಳಾದ ಕೆಂಪಯ್ಯ ಮತ್ತು ಸಂಬೇಗೌಡರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆರೋಪಿಗಳು ಚುನಾವಣೆಯಲ್ಲಿ ಅದೃಷ್ಟ ಖುಲಾಯಿಸುತ್ತದೆ ಎಂದು ರಾಜಕೀಯ ಮುಖಂಡರೇ ಗೂಬೆ ಖರೀದಿಸಲು ಮುಂದಾಗಿದ್ದರು ಎಂದು ಬಾಯ್ಬಿಟ್ಟಿದ್ದಾರೆ. ಯಾವ ರಾಜಕಾರಣಿ ಗೂಬೆ ಖರೀದಿಸಲು ಮುಂದಾಗಿದ್ದರು ಅನ್ನೋ ವಿಚಾರವನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಏನೇ ಆಗಲಿ ಗೂಬೆ ಮಾರಾಟ ಮಾಡುವುದು ಕಾನೂನು ಬಾಹಿರ ವಾಗಿದ್ದು, ನಮ್ಮ ರಾಜಕೀಯ ನಾಯಕರೇ ಮೂಡನಂಬಿಕೆ ಜೋತು ಬಿದ್ದಿರೋದು ವಿಪರ್ಯಾಸವಾಗಿದೆ.

 

Leave a Reply

Your email address will not be published. Required fields are marked *