ವಿಚಾರಣೆಯಲ್ಲಿ ಸತ್ಯ ಬಾಯಿಬಿಡಿಸಲು ಹಾವನ್ನ ಹರಿಬಿಟ್ಟ ಪೊಲೀಸರು..!

ಇಂಡೋನೇಷ್ಯಾ: ಯಾರೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ರು, ಅವ್ರನ್ನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯದ ಎದುರು ಹಾಜರುಪಡಿಸೋದು ಸಾಮಾನ್ಯವಾಗಿ ನಡೆಯುವ ರೀತಿ, ರಿವಾಜು. ಅದೇ ಕಾನೂನು ಪಾಲನೆಯೂ ಹೌದು. ಅವಶ್ಯಕತೆ ಇದ್ದಾಗ, ದೊಡ್ಡ ದೊಡ್ಡ ಕ್ರಿಮಿನಲ್​ಗಳಿಂದ ಬಾಯಿ ಬಿಡಿಸೋಕೆ ಲಾಠಿ ರುಚಿ ತೋರಿಸೋದು ಇದೆ. ಆದ್ರೆ, ಇಂಡೋನೇಷ್ಯಾ​ ಪೊಲೀಸರು ಮಾತ್ರ ವಿಚಾರಣೆ ಮಾಡೋದು ಹಿಂಗಲ್ಲ. ಅವ್ರ ಸ್ಟೈಲೇ ಬೇರೆ.
ಇಂಡೋನಿಷ್ಯಾದ ಪಪುವಾ ಎಂಬಲ್ಲಿ ಆರೋಪಿಯೊಬ್ಬನನ್ನ ಪೊಲೀಸರು ವಿಚಾರಣೆಗೊಳಪಡಿಸಿದ್ರು. ಆದ್ರೆ, ಆತ ತಮಗೆ ಬೇಕಾದ ಮಾಹಿತಿಯನ್ನ ಸರಿಯಾಗಿ ಕೊಡ್ತಿಲ್ಲ, ಸತ್ಯ ಬಾಯಿ ಬಿಡ್ತಿಲ್ಲ ಅಂತ ನಿಜ ಹೊರ ತೆಗೆಯೋಕೆ, ಆರೋಪಿಯ ಮೈಮೇಲೆ ಜೀವಂತ ಹಾವನ್ನ ಹರಿಬಿಟ್ಟಿದ್ದಾರೆ. ಇದು ಪೊಲೀಸರ ಕ್ರೌರ್ಯ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಆಕ್ರೋಶ, ಖಂಡನೆ ವ್ಯಕ್ತವಾಗ್ತಿದ್ದಂತೆ ಎಚ್ಚೆತ್ತ ಅಲ್ಲಿನ ಪೊಲೀಸರು, ಹಾವು ವಿಷಪೂರಿತವಾಗಿರಲಿಲ್ಲ ಅಂತಾ ಸಮಜಾಯಿಷಿ ನೀಡಿ, ತಮ್ಮನ್ನ ಸಮರ್ಥಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಆದ್ರೆ, ಮಾನವ ಹಕ್ಕುಗಳ ಹೋರಾಟಗಾರರು ಮಾತ್ರ ಇದು ಕಾನೂನು ಉಲ್ಲಂಘನೆ. ಈ ಹಿಂದೆಯೂ ಇಂಥ ಕ್ರೌರ್ಯವನ್ನ ಪೊಲೀಸರು, ಸೇನೆಯೂ ಮೆರೆದಿದೆ ಅಂತ ಆರೋಪಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv