ಜಾರಿಯಾಗದ ಔರಾದ್ಕರ್​ ವರದಿ, ಸಿಎಂ ವಿರುದ್ಧ ಖಾಕಿ ಪಡೆ ಅಸಮಾಧಾನ

ತುಮಕೂರು: ಸಿದ್ದಗಂಗಾ ಶ್ರೀಗಳ ಅಂತಿಮ ವಿಧಿವಿಧಾನ ವೇಳೆ ಬಜೆಟ್​ನಲ್ಲಿ ಔರಾದ್ಕರ್​ ವರದಿ ಜಾರಿಗೊಳಿಸುವುದಾಗಿ ಪೊಲೀಸರಿಗೆ ಭರವಸೆ ನೀಡಿದ್ದರು. ಆದರೆ, ಇಂದು ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್​ನಲ್ಲಿ ಔರಾದ್ಕರ್​ ವರದಿ ಜಾರಿಗೊಳಿಸದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್​ ಸಿಬ್ಬಂದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಡೆದಾಡುವ ದೇವರ ಸನ್ನಿಧಾನದಲ್ಲಿ, ಅನ್ನ ತಿನ್ನುವ ಬಾಯಲ್ಲಿ ಕೊಟ್ಟ ಭರವಸೆ ಸುಳ್ಳು ಅಗಿದೆ ಎಂದು ಖಾಕಿ ಪಡೆ ಅಸಮಾಧಾನ ಹೊರಹಾಕಿದೆ. ಪೊಲೀಸರಿಗೆ ಔರಾದ್ಕರ್​ ವರದಿ ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರಿಂದಾಗಿ, ಈ ಬಾರಿನ ಬಜೆಟ್​ ಮೇಲೆ ಪೊಲೀಸರ ಗಮನ ಸೆಳೆದಿತ್ತು. ಬಜೆಟ್​ನಲ್ಲಿ ಔರಾದ್ಕರ್​​ ವರದಿ ಜಾರಿಗೊಳಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ, ಇಂದು ಸಿಎಂ ಮಂಡಿಸಿದ ಬಜೆಟ್​ನಲ್ಲಿ ಔರಾದ್ಕರ್​ ವರದಿ ಬಗ್ಗೆ ಯಾವುದೇ ಅಂಶ ಪ್ರಸ್ತಾಪವಾಗದ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಖಾಕಿ ಪಡೆ ವ್ಯಂಗ್ಯವಾಡುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv