ಪ್ರೊಫೆಸರ್​ ಭಗವಾನ್​ನನ್ನು ಪೊಲೀಸರು ಒದ್ದು‌ ಒಳಗೆ ಹಾಕಬೇಕು-ಪ್ರಹ್ಲಾದ್ ಜೋಶಿ

ಧಾರವಾಡ: ಪ್ರೊಫೆಸರ್​ ಭಗವಾನ್ ಮತ್ತು ನಟ ಪ್ರಕಾಶ ರೈ ಹುಚ್ಚುಚ್ಚರಾಗಿ ಮಾತಾಡ್ತಾ ಇದ್ದಾರೆ. ಈ ಕೂಡಲೇ‌ ಪೊಲೀಸರು ಭಗವಾನ್ ಮೇಲೆ‌ ಸು-ಮೋಟೊ ಕೇಸ್ ಹಾಕಿ, ಒದ್ದು‌ ಒಳಗೆ ಹಾಕಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಬಗ್ಗೆ ಭಗವಾನ್ ಅನಗತ್ಯವಾಗಿ ರಿಯಾಕ್ಷನ್ ಕೊಡ್ತಾ ಇದ್ದಾರೆ. ಅವರಿಗೆ ಯಾವುದೇ ಸಾಮಾಜಿ‌ಕ ಕಾಳಜಿ‌ ಇಲ್ಲ. ಅವರಿಗೆ ನಂಬಿಕೆಗಳು ಇಲ್ಲವಾದ್ರೇ, ಬಾಯಿ‌‌ ಮುಚ್ಚಿಕೊಂಡು ಕುಳಿತಕೊಳ್ಳಬೇಕು. ಮತ್ತೊಬ್ಬರ ವಿಚಾರದ ಕುರಿತು ನಂಬಿಕೆ ಇಲ್ಲದ ಬಗ್ಗೆ ಯಾಕೆ ಮಾತಾಡ್ತಾರೆ. ಅವರಿಬ್ಬರು ಪ್ರಚಾರದ ತೆವಲಿನಿಂದ ಮಾತಾಡ್ತಾ ಇದ್ದಾರೆ. ಅವರಿಗೆ ಧೈರ್ಯ ಇದ್ದರೇ, ಬೇರೆ ಧರ್ಮದ ಬಗ್ಗೆ ಮಾತಾಡಲಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸೋಲು ಆರಂಭವಾದಾಗ ರಾಹುಲ್ ಗಾಂಧಿ ದೇವಸ್ಥಾನ‌ ಸುತ್ತೋಕೆ ಶುರು
ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನ ಸುತ್ತುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಚುನಾವಣೆಗಳಲ್ಲಿ ಸೋಲು ಆರಂಭಗೊಂಡ ಬಳಿಕ ರಾಹುಲ್ ದೇವಸ್ಥಾನ‌ ಸುತ್ತೋಕೆ ಶುರು ಮಾಡಿದ್ದಾರೆ. ಈ ಮೊದಲು ಯಾವ ದೇವಸ್ಥಾನಕ್ಕೂ ಅವರು ಹೋಗಿಲ್ಲ. ಅವರು ಯಾರು ಅನ್ನೋ ಗೊಂದಲದಲ್ಲಿದ್ದರು. ದೇವಸ್ಥಾನಗಳನ್ನು ಸುತ್ತುತ್ತಿರುವ ರಾಹುಲ್‌ ಅವರು ರಾಮಮಂದಿರ ಬಗೆಗಿನ ಕಾಂಗ್ರೆಸ್ ನಿಲುವು ಏನು ಅನ್ನೋದನ್ನು‌ ಬಹಿರಂಗಪಡಿಸಬೇಕು ಅವರು ಆಗ್ರಹಿಸಿದರು.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv