ಐಟಿ ಎದುರು ಪ್ರತಿಭಟನೆ ನಡೆಸಿದ ಸಚಿವ ಮಹೇಶ್​ಗೆ ಪೊಲೀಸ್ ನೋಟಿಸ್

ಮೈಸೂರು: ಸಚಿವ ಸಾ.ರಾ.ಮಹೇಶ್​ಗೆ ಪೊಲೀಸ್​ ನೋಟಿಸ್ ನೀಡಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ರೂ ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರು ನೋಟಿಸ್​ ನೀಡಿದ್ದಾರೆ.

ಐಟಿ ಕಚೇರಿ ಎದುರು ಮಾರ್ಚ್ 28ರಂದು ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ರಾಜಶೇಖರ ಮೂರ್ತಿ ಡಿ.ಎನ್.  ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು. ನಂತರ ಏಪ್ರಿಲ್ 7 ರಂದು ಚುನಾವಣಾ ಅಧಿಕಾರಿಗಳಿಗೆ ಗೋವಾ, ಕರ್ನಾಟಕ ಐಟಿ ಇಲಾಖೆ ಮುಖ್ಯಸ್ಥ ಬಿ.ಆರ್. ಬಾಲಕೃಷ್ಣ​​ ದೂರು ನೀಡಿದ್ದರು. ನೋಟಿಸ್ ತಲುಪಿದ 7ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಸಚಿವ ಸಾ.ರಾ ಮಹೇಶ್​ಗೆ  ಬಾಣಸವಾಡಿ ಎಸಿಪಿ ನೋಟಿಸ್ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv