ಅರ್ಜುನ್ ಮೇಲೆ #MeToo ಆರೋಪ, ಚಾರ್ಜ್​​​ಶೀಟ್ ಸಲ್ಲಿಕೆಗೆ ಕಾಲಾವಕಾಶ ಕೋರಿಕೆ

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧದ​​​ #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ್​ ಪೊಲೀಸರು ಚಾರ್ಜ್​​ಶೀಟ್ ಸಲ್ಲಿಕೆಗೆ ಕಾಲವಕಾಶ ಕೋರಿ ಅನುಮತಿ ಪಡೆದಿದ್ದಾರೆ. ಸಾಕ್ಷಿಗಳ ವಿಚಾರಣೆ ಬಾಕಿ ಇರುವ ಹಿನ್ನೆಲೆ ತನಿಖೆಗೆ ಕಾಲವಕಾಶ ಬೇಕೆಂದು ಪೊಲೀಸರು ಕೇಂದ್ರ ಡಿಸಿಪಿ ಅವರಿಂದ ಅನುಮತಿ ಪಡೆದಿದ್ದಾರೆ.

ವಿಸ್ಮಯ ಚಿತ್ರದ ಚಿತ್ರಿಕರಣದ ವೇಳೆ ಅರ್ಜುನ್​ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ನಟಿ ಶ್ರುತಿ ಹರಿಹರನ್​ ಆರೋಪಿಸಿದ್ದರು. ಈ ಸಂಬಂಧ 2018ರ ಅಕ್ಟೋಬರ್ 25ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕು. ಆದ್ರೆ ತನಿಖೆಗೆ ಸಾಕ್ಷಿಗಳ ವಿಚಾರಣೆ ನಡೆಸಬೇಕಾದ ಹಿನ್ನೆಲೆ ಪೊಲೀಸರು ಮತ್ತಷ್ಟು ಕಾಲವಕಾಶ ಕೋರಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv