ದಾಖಲೆಯಿಲ್ಲದ ಅಟೋಗಳ ವಿರುದ್ಧ ಕಾರ್ಯಾಚರಣೆ

ಹುಬ್ಬಳ್ಳಿ: ಆಟೋ ಚಾಲಕರಿಗೆ ಹುಬ್ಬಳ್ಳಿಯಲ್ಲಿ ಅವಳಿ‌ನಗರ ಪೊಲೀಸರು ಶಾಕ್ ನೀಡಿದ್ದಾರೆ. ದಾಖಲೆಯಿಲ್ಲದೆ ಸಂಚಾರ ಮಾಡುತ್ತಿದ್ದ ಆಟೋಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 30ಕ್ಕೂ ಹೆಚ್ಚು ಆಟೋಗಳಿಗೆ ದಂಡ ವಿಧಿಸಿದರು. ದಾಖಲೆ ಇಲ್ಲದ 10ಕ್ಕೂ ಹೆಚ್ಚು ಆಟೋ ರಿಕ್ಷಾ ಸೀಜ್ ಮಾಡಿದರು.
ನಗರದ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ಸರ್ಕಲ್ ಸೇರಿದಂತೆ ವಿವಿಧ ಕಡೆ ಸಂಚಾರ ವಿಭಾಗದ ಡಿಸಿಪಿ ನ್ಯಾಮೇಗೌಡ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು ದಾಖಲೆ ಇಲ್ಲದೆ ಸಂಚರಿಸುತ್ತಿರುವ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv