ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರ ದಾಳಿ

ಬೆಂಗಳೂರು:ಲೋಕಸಭಾ ಚುನಾವಣಾ ಎಫೆಕ್ಟ್​ ಈಗ ಪರಪ್ಪನ ಅಗ್ರಹಾರಕ್ಕೂ ತಟ್ಟಿದೆ. ಜೈಲಿನಲ್ಲಿಯೇ ಕುಳಿತು ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಹಿನ್ನೆಲೆ ಸಿಸಿಬಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್, ಜೈಲಿನಿಂದಲೇ ಕೆಲ ರೌಡಿಗಳು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದರು ಹಾಗೂ ಮತದಾರರನ್ನ ಆಪರೇಟ್ ಮಾಡ್ತಿದ್ದರೂ ಅನ್ನೋ ಮಾಹಿತಿ ಬಂದ ಹಿನ್ನೆಲೆ ರೇಡ್ ಮಾಡಲಾಗಿದೆ. ಇನ್ನೂ ಕೆಲವು ರೌಡಿಗಳಿಂದ 15 ಮೊಬೈಲ್ ಗಾಂಜಾ ಸೇರಿದಂತೆ ಹಲವು ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಈ ಬಗ್ಗೆ ಪ್ರಕರಣವನ್ನ ದಾಖಲು ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ.