ಮಾಲ್​ಗಳಿಗೆ ಪೊಲೀಸ್​​ ಭದ್ರತೆ, ಬಿಎಂಟಿಸಿ ಬಸ್ ಕರೆತಂದ ಖಾಕಿ ಪಡೆ

ಬೆಂಗಳೂರು: ಇಂದು ಕಾಲಾ ಚಿತ್ರದ ಬಿಡುಗಡೆ ಹಿನ್ನಲೆಯಲ್ಲಿ ಥಿಯೇಟರ್​​ಗಳು ಹಾಗೂ ಮಾಲ್​​​ಗಳ​​ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾವೇರಿ ವಿಚಾರವಾಗಿ ನಟ ರಜನಿಕಾಂತ್​ ನೀಡಿದ ಹೇಳಿಕೆ ಕನ್ನಡಿಗರಲ್ಲಿ ಅಸಮಾಧಾನ ಮೂಡಿಸಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಪೊಲೀಸರು ಎಲ್ಲಾ ರೀತಿಯ ತಯಾರಿಯನ್ನ ಮಾಡಿಕೊಂಡಿದ್ದಾರೆ.

ಮಂತ್ರಿಮಾಲ್ ಮುಂಭಾಗ ಪೊಲೀಸರನ್ನ ನಿಯೋಜಿಸಲಾಗಿದೆ. ಒಂದು ವೇಳೆ ಪ್ರತಿಭಟನೆ ನಡೆಸಿದ್ರೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಪ್ರತಿಭಟನಕಾರರನ್ನ ಬಂಧಿಸಿ ಕರೆದೊಯ್ಯಲು ಖಾಕಿ ಪಡೆ, ಬಿಎಂಟಿಸಿ ಬಸ್ ಕರೆತಂದಿದೆ. ಭದ್ರತೆಗಾಗಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿನ ಥಿಯೇಟರ್‌ಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಗರುಡಾ ಮಾಲ್‌ ಬಳಿ 2 ಕೆಎಸ್‌ಆರ್‌ಪಿ ತುಕಡಿ, ಒಬ್ಬರು ಇನ್ಸ್‌ಪೆಕ್ಟರ್‌, 4 ಸಬ್‌ ಇನ್ಸ್‌ಪೆಕ್ಟರ್ ಹಾಗೂ 50ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv