ಮಂಗಳೂರಿನಲ್ಲಿ ನಟೋರಿಯಸ್ ರೌಡಿ ಮೇಲೆ ಪೊಲೀಸರಿಂದ ಫೈರಿಂಗ್

ಮಂಗಳೂರು: ಮಂಗಳೂರಿನಲ್ಲಿ ನಟೋರಿಯಸ್ ರೌಡಿ ಉಮರ್ ಫಾರೂಕ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಮಂಗಳೂರು ನಗರ ಹೊರವಲಯದ ಪಚ್ಚನಾಡಿಯಲ್ಲಿ ಘಟನೆ ನಡೆದಿದೆ. ಮಾಹಿತಿ ಮೇರೆಗೆ ಆರೋಪಿ ಫಾರೂಕ್​​ನನ್ನು ಹಿಡಿಯಲು ಪೊಲೀಸರು ಪಚ್ಚನಾಡಿಗೆ ತೆರಳಿದ್ದರು. ಆಗ ಆತ ಶರಣಾಗದೇ ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೋಸ್ಕರ ಪೊಲೀಸರು ಆರೋಪಿ ಮೇಲೆ ಫೈಿರಿಂಗ್ ನಡೆಸಿದ್ದಾರೆ. ಇದರಿಂದ ಫಾರೂಕ್​ಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸಂದೀಪ್‌ ಎಂಬವರು ಕೂಡ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಪ್ರಮುಖ ಪ್ರಕರಣಗಳಲ್ಲಿ ಫಾರೂಕ್ ಪೊಲೀಸರಿಗೆ ಬೇಕಾಗಿದ್ದ. ಮರ್ಡರ್ ಪ್ರಕರಣದ ಆರೋಪಿ ಸಮೀರ್ ಕೊಲೆ‌ಗೆ ಸ್ಕೆಚ್ ಹಾಕುವಲ್ಲಿ ಈತ ಭಾಗಿಯಾಗಿದ್ದ. ಉಮರ್ ಫಾರೂಕ್, ಟಾರ್ಗೆಟ್ ಗ್ರೂಪ್ ಇಲಿಯಾಸ್‌ನ ಅಳಿಯ. ಉಮರ್ ಫಾರೂಕ್, ಸುರ್ಮಾ ಇಮ್ರಾನ್ ಹಾಗೂ ಇತರರು  ಸೇರಿ ಸಮೀರ್ ಕೊಲೆಗೆ ಸ್ಕೆಚ್ ಹಾಕಿದ್ದರು.

Follow us on: 

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv