ಬಾಡೂಟಕ್ಕೆ ಒಂದು ದಿನದ ರಜೆ ಕೇಳಿದ ಮೈಸೂರು ಪೊಲೀಸಪ್ಪ..!

ಮೈಸೂರು: ‘ಸರ್,​ ತಿಂಗಳಿಂದ ಚುನಾವಣೆ ಕೆಲಸ ಮಾಡಿ‌ ಆಯಾಸವಾಗಿದೆ, ನನಗೆ ಬಿಪಿ, ಮಧುಮೇಹ ಇದೆ. ಹೀಗಾಗಿ ವಿಶ್ರಾಂತಿ ಜತೆಗೆ ಬಾಡೂಟ ತಿನ್ನಬೇಕೆಂದು ಮನಸು ಮಾಡಿರುವೆ. ಅದಕ್ಕಾಗಿ ನಂಗೆ ರಜೆ ಬೇಕು’ ಎಂದು ನಗರದ ನಜರಬಾದ್ ಎಎಸ್ಐ ಮಂಜುನಾಥ್.ಪಿ ಎಂಬ ಅಧಿಕಾರಿಯ ಸಹಿ ಇರುವ ರಜೆ ಪತ್ರ ವೈರಲ್​ ಆಗಿದೆ. ಇನ್ನು ಕಾಕತಾಳಿಯ ಎಂಬಂತೆ ಇಂದು ಎಎಸ್ಐ ಮಂಜುನಾಥ್ ರಜೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಎಎಸ್ ಐ ಮಂಜುನಾಥ್ ಮನವಿಗೆ ಸ್ಪಂದಿಸಿ ಹಿರಿಯ ಅಧಿಕಾರಿಗಳು ರಜೆ ನೀಡಿದ್ರಾ..? ಎಂದು ಶಿಸ್ತಿನ ಇಲಾಖೆಯಲ್ಲಿ ವ್ಯಂಗ್ಯದ ಮಾದರಿ ರಜೆ ಪತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv