ಕತ್ತು ಸೀಳಿ ಹತ್ಯೆಗೈದಿದ್ದ ಅಪರಿಚಿತ ಯುವತಿಯ ಗುರುತು ಪತ್ತೆ

ಹುಬ್ಬಳ್ಳಿ: ಕಳೆದ ಬುಧವಾರ ಹುಬ್ಬಳ್ಳಿಯ ಕೊಟಗುಣಸಿ ಗ್ರಾಮದ ಜಮೀನಿನಲ್ಲಿ ಕತ್ತು ಸೀಳಿ ಹತ್ಯೆ ಮಾಡಲಾಗಿದ್ದ ಅಪರಿಚಿತ ಯುವತಿಯ ಗುರುತು ಪತ್ತೆ ಮಾಡುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಯಾದ ಯುವತಿಯನ್ನು ಮಂಟೂರು ರಸ್ತೆಯ ಅಹ್ಮದ್ ಕಾಲೋನಿಯ ಸ್ಟೆಲ್ಲಾ ಬಾಲರಾಜ್ ಮೊತಕುರಿ ( 23) ಎಂದು ಗುರುತಿಸಲಾಗಿದೆ.

ಮೃತ ಯುವತಿ ವಿದ್ಯಾನಗರದ ಖಾಸಗಿ ಕಂಪನಿಯ ಹೆಚ್‌ಆರ್ ವಿಭಾಗದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಳೆದ ಬುಧವಾರ ಕೆಲಸ ಮುಗಿಸಿಕೊಂಡು ಸಂಜೆ 7.30ಕ್ಕೆ ಹೊರ ಯುವತಿ ಬಂದಿದ್ದಳು. ಬಳಿಕ ಯುವತಿಯು ಕೊಟಗುಣಸಿ ಗ್ರಾಮದ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು,  ಯುವತಿಯನ್ನು ಯಾರು, ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂಬ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv