ಮಾನಸಿಕ ಅಸ್ವಸ್ಥನಿಗೆ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದ ಪೇದೆ

ಶಿವಮೊಗ್ಗ: ಬಟ್ಟೆ ಇಲ್ಲದೇ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಪೊಲೀಸ್ ಪೇದೆಯೊಬ್ಬರು ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. 

ಸಾಗರ ನಗರ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ ಯುವಕನೋರ್ವ ಮೈಮೇಲೆ ಬಟ್ಟೆ ಇಲ್ಲದೇ ಕಳೆದೊಂದು ತಿಂಗಳಿಂದ ಓಡಾಡುತ್ತಿದ್ದ. ಇದನ್ನು ಗಮನಿಸಿದ ಪಿಸಿಆರ್ ವಾಹನ ಚಾಲಕ ದಫೇದಾರ್ ನರಸಿಂಹ ಹೊಸ ಬಟ್ಟೆಗಳನ್ನು ಕೊಡಿಸಿದ್ದಾರೆ. ಆತ ಬಟ್ಟೆಗಳನ್ನು ಉಡಲು ನಿರಾಕರಿಸಿದಾಗ ಸ್ವತಃ ತಾವೇ ಆತನಿಗೆ ಬುದ್ಧಿ ಹೇಳಿ ತೊಡಿಸಿದ್ದಾರೆ. ನಂತರ ಊಟ ಮಾಡಬೇಕು ಹಣ ಕೊಡಿ ಎಂದಾಗ ನರಸಿಂಹ, ಹೋಟೆಲ್ ಇಂದ ಊಟ ಕೊಡಿಸಿದ್ದಾರೆ. ನಂತರ ನಾನು ‘ನಿನ್ನನ್ನು ದಿನಾ ಗಮನಿಸುತ್ತೇನೆ ನಿನ್ನ ಬಟ್ಟೆ ಹಾಗೂ ಶರೀರವನ್ನು ಶುದ್ಧವಾಗಿಟ್ಟುಕೊ’ ಎಂದು ಹೇಳಿದ್ದಾರೆ.

ದಫೇದಾರ್ ನರಸಿಂಹ ಈ ಬಗ್ಗೆ ಮಾತನಾಡಿ, ನಮ್ಮ ಎಎಸ್​ಪಿ ಸಾಹೇಬ್ರು ನನ್ನ ಬಳಿ ಕೇಳಿದರು. ಆತ ಏತಕ್ಕೆ ಹೀಗೆ ಓಡಾಡುತ್ತಿದ್ದಾನೆ ಅಂತಾ. ನಂತ್ರ ನಾವು ಅವನಿಗೆ ಟೀ ಶರ್ಟ್ ಹಾಕಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ವಿ. ಆತ ಒಮ್ಮೊಮ್ಮೆ ನಾನು ಮಧ್ಯಪ್ರದೇಶದವನು, ಟೈಲ್ಸ್ ಕೆಲ್ಸಕ್ಕೆ ಕರೆದುಕೊಂಡು ಬಂದ್ರಿದ್ರು ಅಂತ ಹೇಳ್ತಾನೆ. ಆದಕ್ಕಿಂತ ಹೆಚ್ಚೇನು ಹೇಳಲ್ಲ. ಸದ್ಯ ಆತನ ವಿಳಾಸದ ಬಗ್ಗೆ ಪತ್ತೆ ಹಚ್ಚುತ್ತಿದ್ದೇವೆ ಎಂದಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv