ತರಬೇತುದಾರನ ರಕ್ಷಣೆಗೆ ಧಾವಿಸಿ ಬಂದ ಶ್ವಾನ ಈಗ ಇಂಟರ್ನೆಟ್​​ ಹೀರೋ

ಪೊಲೀಸ್ ಶ್ವಾನಗಳು ಅಂದ್ರೆನೇ ಹಾಗೆ. ತಮ್ಮ ಹ್ಯಾಂಡಲರ್​ಗೆ ಕೊಂಚ ಅಪಾಯವಾಗುತ್ತಿದೆ ಅಂದ್ರೆ ಅವರ ಜೀವರಕ್ಷಣೆಗೆ ಧಾವಿಸಿ ಬರುತ್ತವೆ. ಅಷ್ಟು ಪಕ್ಕಾ ತರಬೇತಿ ಪಡೆದು ರೆಡಿಯಾಗಿರುತ್ವೆ ಪೊಲೀಸ್ ಶ್ವಾನಗಳು. ಅದೇ ರೀತಿ ತನ್ನ ತರಬೇತುದಾರನ ಜೀವ ರಕ್ಷಣೆಗೆಂದು ಧಾವಿಸಿ ಬಂದ ಸ್ಪೇನ್​​ನ ಶ್ವಾನವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್​ ಆಗಿದೆ. ವಿಡಿಯೋದಲ್ಲಿ ಶ್ವಾನದ ತರಬೇತುದಾರ ಪ್ರಜ್ಞೆ ತಪ್ಪಿ ಬಿದ್ದಂತೆ ನಟಿಸುತ್ತಾನೆ. ಈ ವೇಳೆ ಆತನ ಬಳಿ ಓಡಿ ಬರೋ ಶ್ವಾನ ತರಬೇತುದಾರನ ಎದೆ ಮೇಲೆ ಜಿಗಿದು ಜಿಗಿದು ಆತನಿಗೆ ಪ್ರಜ್ಞೆ ತರಿಸಲು ಯತ್ನಿಸುತ್ತೆ. ತರಬೇತುದಾರ ಉಸಿರಾಡುತ್ತಿದ್ದಾನಾ ಎಂದು ನೋಡಲು ತನ್ನ ಕಿವಿಯನ್ನ ಆತನ ಎದೆಯ ಬಳಿ ಇಡೋದನ್ನೂ ಕಾಣಬಹುದು. ಈ ಅಪರೂಪದ ವಿಡಿಯೋವನ್ನ ಸದ್ಯ ಮ್ಯಾಡ್ರಿಡ್​ನ ಮುನ್ಸಿಪಲ್ ಪೊಲೀಸ್​ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದೆ. ಈಗಾಗಲೇ ಈ ವಿಡಿಯೋ 11 ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್​ ಆಗಿದ್ದು 20 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿ ಶ್ವಾನದ ಜಾಣ್ಮೆಗೆ ವಾವ್​ ಎನ್ನುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv