ಮೈಸೂರು ದಸರಾ: ಜಂಬೂ ಸವಾರಿಯಲ್ಲಿ 2 ಸಾವಿರ ಕಲಾವಿದರಿಗೆ ಅವಕಾಶ

ಮೈಸೂರು: ಜಬೂಂಸವಾರಿ ಹಾಗೂ ಹಿಂದಿನ ದಿನ ಗ್ರಾಮಾಂತರ ಪ್ರಯಾಣಿಕರಿಗೆ ನಗರದ ಹೊರಭಾಗದಲ್ಲಿ ತಾತ್ಕಾಲಿಕ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಂಬೂಸವಾರಿಗೆ ಕಲಾ ತಂಡ ಸೇರಿಸಲು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ದಸರಾದಲ್ಲಿ ಎರಡು ಬಾರಿ ಜನಪದ ಕಲಾ ತಂಡಗಳ ಮೆರೆವಣಿಗೆ ನಡೆಸಲಾಗುವುದು ಮತ್ತು 2 ಬಾರಿ ಬೇರೆ ಬೇರೆ ಕಲಾ ತಂಡಗಳ ಮೆರವಣಿಗೆ ನಡೆಸಲಾಗುವುದು ಎಂದು ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚೆನ್ನಪ್ಪ ಮಾಹಿತಿ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಪೊಲೀಸ್​  ಇಲಾಖೆಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಆನೆಗಳ ಜೊತೆಗೆ ಎರಡು ಬಾರಿ ಕಲಾ ತಂಡಗಳ ಮೆರವಣಿಗೆ ನಡೆಸಲಿವೆ. ಜಂಬೂಸವಾರಿ ಆನೆಗಳಿಗೆ ಪೂರ್ವಭಾವಿ ತರಬೇತಿ ದೃಷ್ಟಿಯಿಂದ ಅಕ್ಟೋಬರ್ 14 ರಂದು ಪೂರ್ವಭಾವಿ ಕಲಾ ತಂಡಗಳ ಮೆರವಣಿಗೆ ನಡೆಸಲಾಗುವುದು. ಈ ಬಾರಿ ಜಂಬೂ ಸವಾರಿಯಲ್ಲಿ 40 ಕಲಾವಿದರನ್ನು ಒಳಗೊಂಡ ಒಟ್ಟು 40 ಕಲಾ ಪ್ರಕಾರದ ಜನಪದ ತಂಡಗಳು ಭಾಗಿಯಾಗಲಿವೆ. ಮೈಸೂರು ಜಿಲ್ಲೆಯ 10 ತಂಡಗಳಿಗೆ ಜಂಬೂ ಸವಾರಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 40 ಕಲಾತಂಡಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆ ಆಕರ್ಷಣೆಗಾಗಿ 10 ವಿಶೇಷ ಕಲಾತಂಡಗಳ ಆಯ್ಕೆ ಮಾಡಲಾಗುವುದು. ಉತ್ತರ ಭಾರತದ ವಿವಿಧ ರಾಜ್ಯಗಳಿಂದ 5 ಕಲಾತಂಡಗಳು ಭಾಗಿಯಾಗಲಿವೆ. ಜಂಬೂ ಸವಾರಿಯಲ್ಲಿ ಒಟ್ಟು 2 ಸಾವಿರ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ದಸರಾ ಮಹೋತ್ಸವದಲ್ಲಿ ಭಾಗಿಯಾಗೋ ಕಲಾವಿದರಿಗೆ ತಲಾ ₹1500 ಗಳ ಪ್ರೋತ್ಸಾಹಧನ, ಊಟೋಪಚಾರದ ವ್ಯವಸ್ಥೆ ಕಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv