ಕಟ್ಟಡ ದುರಂತದಲ್ಲಿ ಕಾಣೆಯಾದವರಿಗೆ ಪೊಲೀಸ್ ಇಲಾಖೆ ಸಹಾಯ ಕೇಂದ್ರ

ಧಾರವಾಡ: ಕಟ್ಟಡ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಣೆಯಾದವರಿಗೆ ಪೊಲೀಸ್ ಇಲಾಖೆ ಸಹಾಯ ಕೇಂದ್ರ ತೆರೆದಿದ್ದು, ಇದುವರೆಗೂ ಕಾಣೆಯಾದ 12  ಜನರ ಹೆಸರು ದಾಖಲಿಸಿಕೊಂಡಿದೆ. ಕಟ್ಟಡದಲ್ಲಿ ಸಿಲುಕಿರುವ ಸಂಶಯದ ಮೇಲೆ ಪೋಷಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಹದೇವ್ ಸಾಳುಂಕೆ, ಝಾಕೀರ್ ಸಾಬ್ ಹರಿಹರ್, ವೀರಪ್ಪ ಹಡಪದ, ಅನೂಪ್ ಕುಡತಕರ್, ದಾಕ್ಷಾಯಿಣಿ ಮುತ್ತೂರು, ಸಂಗಮೇಶ ಮಾನ್ವಿ, ಗಂಜಪ್ಪ ಲಕ್ಕುಂಡಿ, ವಾಗೂ ಝೋಕೆ, ಥಾಕುಲು ಕೋಕ್ರೆ, ಸಂಗೀತ ಕೋಕ್ರೆ, ಸಂಗನಗೌಡ ಕಾಡರಾಮನಗೌಡರ ಹೆಸರು ನೋಂದಾಯಿಸಲಾಗಿದ್ದು, ಕಟ್ಟಡದಲ್ಲಿ ಸಿಲುಕಿರುವವರಿಗೆ ಶೋಧ ಇನ್ನೂ ಮುಂದುವರೆದಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv