ಸಿಎಂ ವಿರುದ್ಧ ದೂರು ನೀಡಿದ್ದಕ್ಕೆ ಐಟಿಗೇ ಪೊಲೀಸರಿಂದ ನೋಟಿಸ್​..!

ಬೆಂಗಳೂರು: ಐಟಿ ಅಧಿಕಾರಿಗಳ ವಿರುದ್ಧ ಪೊಲೀಸ್​ ಇಲಾಖೆ ಅಸಮಾಧಾನಗೊಂಡಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ಗರಂ ಆಗಿದೆ. ಈ ಸಂಬಂಧ ಐಟಿ ಡಿಜಿ ಬಾಲಕೃಷ್ಣನ್ ಅವರಿಗೆ ನೋಟಿಸ್ ನೀಡಿದ್ದಾರೆ. ನೀವು ಚುನಾವಣಾ ಆಯೋಗಕ್ಕೆ ದೂರು ನೀಡುವ ಮೊದಲೇ ನಾವು ಕೇಸ್ ದಾಖಲು ಮಾಡಿದ್ದೆವು. ಆದ್ರೆ ಮತ್ತೆ ನೀವು ಚುನಾವಣಾ ಆಯೋಗಕ್ಕೆ ಹೆಸರು ಸಮೇತ ದೂರು ನೀಡಿದ್ದೀರಿ. ಈ ಹಿನ್ನೆಲೆಯಲ್ಲಿ ನೀವು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗಿ ಉತ್ತರಿಸುವಂತೆ ಐಟಿ ಡಿಜಿಗೆ ಪೊಲೀಸ್​ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಕೂಡ ಪತ್ರ ಬರೆದಿದ್ದಾರೆ. ಇನ್ನು ಪ್ರಕರಣ ಸಂಬಂಧ ಕೆಲವೊಂದು ಸೆಕ್ಷನ್​ಗಳನ್ನ ಎಫ್ಐಆರ್ ನಲ್ಲಿ ಸೇರಿಸಲು ಕೋರ್ಟ್ ಅನುಮತಿಯನ್ನೂ ಕೇಳಲಾಗಿದೆ.

ಇದನ್ನೂ ಓದಿ: ಕರ್ತವ್ಯಕ್ಕೆ ಅಡ್ಡಿ ಆರೋಪ; ಸಿಎಂ, ಡಿಸಿಎಂ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​​ ವಿರುದ್ಧ ಐಟಿ ದೂರು..!


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv