‘ಪ್ರತಿ ಕಣ್ಣುಗಳೂ ಸಿಸಿ ಕ್ಯಾಮರಾವಾದ್ರೆ 1.25 ಕೋಟಿ ಜನರ ಮೇಲೆ ನಿಗಾವಹಿಸೋದು ಸುಲಭ’

ಬೆಂಗಳೂರು: ನಗರದಲ್ಲಿರುವ ಪ್ರತೀ ಕಣ್ಣುಗಳು ಸಿಸಿ ಟಿವಿಗಳಾದರೆ 1.25 ಕೋಟಿ ಜನರ ಮೇಲೆ ನಿಗಾವಹಿಸಲು ಸುಲಭವಾಗಲಿದೆ ಅಂತಾ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಹಿನ್ನೆಲೆ, ನಗರದಲ್ಲಿಯೂ ಭದ್ರತೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ನಗರದ ಹೋಟೆಲ್, ಚರ್ಚ್, ಪ್ರಾರ್ಥನಾ ಮಂದಿರಗಳು, ದೇವಾಲಯಗಳ ಮುಖ್ಯಸ್ಥರೊಂದಿಗೆ ಪೊಲೀಸ್ ಆಯುಕ್ತರು ಸಭೆ ನಡೆಸಿದ್ರು. ಸಭೆಯಲ್ಲಿ, ಸಾರ್ವಜನಿಕರು ಸೇರುವ ಸ್ಥಳಗಳ ಮುಖ್ಯಸ್ಥರಿಗೆ ಕೆಲ ನಿರ್ದೇಶನಗಳನ್ನ ಪಾಲಿಸಲು ಸೂಚನೆ ನೀಡಲಾಗಿದೆ. ಪ್ರತಿ ಪ್ರಾರ್ಥನಾ ಸ್ಥಳಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಅದಕ್ಕಾಗಿ ಸಿಸಿಟಿವಿ ಅಳವಡಿಕೆ, ಖಾಸಗಿ ಸೆಕ್ಯುರಿಟಿ ಅಥವಾ ಸದರಿ ಸಂಸ್ಥೆಗಳ ಸ್ವಯಂ ಸೇವಕರ ಬಳಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ 2017ರ ನಿಬಂಧನೆಗೆ ಒಳಪಟ್ಟ ಎಲ್ಲಾ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ. ಹಾಗೂ ಹೋಟೆಲ್, ಮಾಲ್ ಇತ್ಯಾದಿ ಸ್ಥಳಗಳಲ್ಲಿ ಎಚ್ಎಚ್ಎಂಡಿ, ಡಿಎಫ್ಎಂಡಿಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೋಲಿಸರಿಗೆ ಸೂಚನೆ ನೀಡಲು ತಿಳಸಿದ್ದಾರೆ. ಅಲ್ಲದೇ, ಸಾರ್ವಜನಿಕರು ತಂಗುವ ಸ್ಥಳಗಳಲ್ಲಿ ಗುರುತಿನ ಚೀಟಿಗಳ ಖಾತ್ರಿ ಕಡ್ಡಾಯ‌ ಸೇರಿದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತಾತ್ಕಾಲಿಕವಾಗಿರದೇ, ಶಾಶ್ವತವಾಗಿ ಅಳವಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಆಯುಕ್ತ ಟಿ. ಸುನಿಲ್​ ಕುಮಾರ್​, ಸಭೆಯಲ್ಲಿ ಭಾಗವಹಿಸಿದ ಎಲ್ಲರಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರು, ಸಂಸ್ಥೆಗಳ ಮುಖಂಡರು ಉತ್ಸಾಹದಿಂದಲೇ ಪಾಲ್ಗೊಂಡಿದ್ದಾರೆ. ನಗರಕ್ಕೆ ಪ್ರತ್ಯೇಕವಾಗಿ ATS ( Anti Terrorism Squad ) ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ನಂತರ ATS ರಚನೆ ಆಗಲಿದೆ. ಬೆಂಗಳೂರು ವಿಶ್ವದಲ್ಲೇ ಬೆಳೆಯುತ್ತಿರುವ ನಗರ ಹೀಗಾಗಿ ATS ಅಗತ್ಯ ಇದೆ ಅಂತಾ ಹೇಳಿದರು.

ಇದನ್ನೂ ಓದಿ:  ಶ್ರೀಲಂಕಾ ಸ್ಫೋಟ; ಬೆಂಗಳೂರು ಪೊಲೀಸ್ ಕಮೀಷನರ್​ ಜೊತೆ ಪ್ರಮುಖ ಧಾರ್ಮಿಕ ಮುಖ್ಯಸ್ಥರ ಸಭೆ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv