ಸೂಟ್​ಕೇಸ್​ನಲ್ಲಿ ಬಾಂಬ್​ ಉಂಟು ಅಂತಾ ಬ್ಲಾಸ್ಟ್​ ಮಾಡಿದ್ರೆ, ಸಿಕ್ಕಿದ್ದು ಮಾತ್ರ..

ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್​ಗಳು ತಮ್ಮ ಅಮೂಲ್ಯ ವಸ್ತುಗಳನ್ನು ಸಾಗಿಸುವ ವೇಳೆ, ಅಲ್ಲಿನ ಭದ್ರತಾ ಸಿಬ್ಬಂದಿ ನಡೆಸುವ ತಪಾಸಣೆ ಬೆಚ್ಚಿಬೀಳುವುದು ಸಾಮಾನ್ಯ. ಅಷ್ಟರಮಟ್ಟಿಗೆ ವಿಪರೀತ ಎನ್ನುವಂತಿರುತ್ತದೆ ಆ ತಪಾಸಣೆ. ಇತ್ತೀಚೆಗೆ ವೃದ್ಧೆಯೊಬ್ಬರು ಬಾಂಬೆಗೆ ವಾಪಸಾಗುವ ವೇಳೆ ಆಕೆಯ ಲಗೇಜ್​ ಬ್ಯಾಗ್​ ಮೇಲೆ ಬಾಂಬೆ ಹೆಸರು ಬರೆಯಲು ಹೋಗಿ, ಬಾಂಬ್​ ಎಂದು ಬರೆದು ರಕ್ಷಣಾ ಸಿಬ್ಬಂದಿ ಇಕ್ಕಟ್ಟಿಗೆ ಸಿಲುಕಿದ್ದರು.

ಇನ್ನು, ಇದೇ ರೀತಿ ರೋಮ್​​ ಏರ್​​ಪೋರ್ಟ್​ನಲ್ಲಿ ಇಟಲಿ ಪೊಲೀಸರು ಅನುಮಾನಗೊಂಡು ಪ್ರಯಾಣಿಕರೊಬ್ಬರನ್ನ ತಡೆದಿದ್ದಾರೆ. ಸದರಿ ಪ್ರಯಾಣಿಕನ ಕೈಯಲ್ಲಿದ್ದ ಸೂಟ್​ಕೇಸ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೂಟ್​ಕೇಸ್​ನಲ್ಲಿ ಬಾಂಬ್​​ ಇರಬಹುದು ಎಂದು ಪೊಲೀಸರು ಅನುಮಾನಗೊಂಡಿದ್ದರು.

ಹಾಗಾಗಿ, ಸೂಟ್​ಕೇಸ್​ನಲ್ಲಿ ಬಾಂಬ್​ ಇರಬಹುದು ಎಂದು ಭಾವಿಸಿ, ಬ್ಯಾಗ್​ ಅನ್ನು ಬ್ಲಾಸ್ಟ್​ ಮಾಡಿದ್ದಾರೆ. ಅದೂ ಏರ್​ಪೋರ್ಟ್​ನಲ್ಲಿಯೇ.. 10 ಮೀಟರ್​ ದೂರದಲ್ಲಿ ಇತರೆ ಪ್ರಯಾಣಿಕರು ಹಾದುಹೋಗುವಾಗ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆಗ ಬ್ಯಾಗ್​ ಚೆಲ್ಲಾಪಿಲ್ಲಿಯಾಗಿದೆ. ಆದ್ರೆ ಅದರಲ್ಲಿ ಇದ್ದಿದ್ದು ತೆಂಗಿನಕಾಯಿಗಳು ಮಾತ್ರ. ಸೂಟ್​ಕೇಸ್​​ನಲ್ಲಿ ಏರ್​ಪೋರ್ಟ್​ ಸಿಬ್ಬಂದಿ ಅಂದುಕೊಂಡಂತೆ ಬಾಂಬ್​ ಇರಲಿಲ್ಲ.. ಬದಲಿಗೆ ಸೂಟ್​ಕೇಸ್​ನಲ್ಲಿ ತೆಂಗಿನಕಾಯಿ ಪ್ಯಾಕ್​ ಮಾಡಲಾಗಿತ್ತು.

ಅಕಸ್ಮಾತ್​ ಅದು ನಿಜವಾದ ಬಾಂಬ್​ ಆಗಿದ್ದು, ಸ್ಫೋಟ ಸಂಭವಿಸಿದ್ದರೆ ಪೊಲೀಸರ ಅಚಾತುರ್ಯದಿಂದ ಜನನಿಬಿಡ ಏರ್​ಪೋರ್ಟ್​​ನಲ್ಲಿ  ದೊಡ್ಡಮಟ್ಟದ ದುರಂತವೇ ಸಂಭವಿಸುತ್ತಿತ್ತು.

ಇನ್ನು, ಹವ್ಯಾಸಿ ಪತ್ರಕರ್ತ ನೆಡ್​​​​ ಡೊನೊವನ್​​, ಏರ್​ಪೋರ್ಟ್​​ನಲ್ಲಿ ನಡೆದ ಘಟನೆಯನ್ನು ವಿಸ್ತಾರವಾಗಿ ತನ್ನ ಟ್ಟಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv