ಇಬ್ಬರು ಬಂದೂಕು ಕಳ್ಳರ ಸೆರೆ.!

ಕೊಡಗು: ಇಬ್ಬರು ಬಂದೂಕು ಕಳ್ಳರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಕೆ.ಸಿ. ಅಶೋಕ್(29) ಹಾಗೂ ಆತನಿಗೆ ನೆರವಾಗಿದ್ದ ನಾಣಯ್ಯ ಬಂಧಿತ ವ್ಯಕ್ತಿಗಳು. ತಿಂಗಳ ಹಿಂದೆ ಅಶೋಕ್ ಮಡಿಕೇರಿಯ ಓಂಕಾರೇಶ್ವರ ದೇವಾಲಯ ಬಳಿಯ ಮನೆಯಿಂದ ಎರಡು ಬಂದೂಕು ಹಾಗೂ ಚಿನ್ನಾಭರಣ ಕಳವು ಮಾಡಿದ್ದ. ಅದರಲ್ಲಿ ಒಂದನ್ನು ಮಾರಾಟ ಮಾಡಿದ್ದು, ಮತ್ತೊಂದು ಬಂದೂಕನ್ನು ಮಾರಾಟ ಮಾಡಲು ಜೂ.3 ರಂದು ಮುಂಜಾನೆ ಗಾಳಿಬೀಡು ಕಡೆ ತೆರಳುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 2 ಲಕ್ಷ ರೂಪಾಯಿ ಮೌಲ್ಯದ 2 ಬಂದೂಕು, 34 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv