ಜಸ್ಟ್​ ₹251ಕ್ಕೆ ಮೊಬೈಲ್​ ಕೊಡ್ತೀನಿ ಎಂದಿದ್ದವನ ಬಂಧನ

ನವದೆಹಲಿ: ‘ಫ್ರೀಡಂ 251’ ಎನ್ನುವ ಮೊಬೈಲ್​ 251 ರೂಪಾಯಿಗೆ ನೀಡ್ತೇವೆ ಎಂದು ಹೇಳಿದ್ದ ರಿಂಗಿಂಗ್​ ಬೆಲ್ಸ್​ ಕಂಪನಿಯ ಮಾಲೀಕ ಮೋಹಿತ್​ ಗೋಯಲ್​ನನ್ನು ದೆಹಲಿಯ ಪೊಲೀಸ್ರು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಹಣ ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈತ ಹಾಗೂ ಇನ್ನಿಬ್ಬರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ ಅಂತಾ ನ್ಯೂಸ್​ ಏಜೆನ್ಸಿಯೊಂದು ವರದಿ ಮಾಡಿದೆ.

ರಿಂಗಿಂಗ್​ ಬೆಲ್​ ಕಂಪನಿಯ ‘ಫ್ರೀಡಂ 251’ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಸ್ಮಾರ್ಟ್​ ಫೋನ್​ ಎಂಬ ಮಾತು ಕೇಳಿಬಂದಿತ್ತು. ಅಲ್ಲದೇ ಈ ಫೋನ್​ಗಾಗಿ ಸುಮಾರು 30,000 ಜನ ಬುಕ್ಕಿಂಗ್​ ಮಾಡಿದ್ದರು. ಸುಮಾರು 7 ಕೋಟಿಗೂ ಹೆಚ್ಚು ಜನ ರಿಜಿಸ್ಟರ್​ ಮಾಡಿಕೊಂಡಿದ್ದರು. ಹೀಗೆ ಕೆಲ ಕಾಲ ಹೆಚ್ಚು ಸುದ್ದಿಯಾದ ಕಂಪನಿ ಕಾಂಟ್ರೋವರ್ಸಿಗಳಿಗೆ ಗುರಿಯಾಗಿ ಕೊನೆಗೆ ಇದು ಟೋಪಿ ಸಂಸ್ಥೆ ಎಂದು ಖಾತರಿಯಾಗಿತ್ತು.

ಉತ್ತರ ಪ್ರದೇಶದ ನೊಯ್ಡಾ ಮೂಲದ ಈ ಕಂಪನಿ ಚಕಿತಗೊಳಿಸುವ ಬೆಲೆಗೆ ಫೋನ್​ ಕೊಡುವುದಾಗಿ ಹೇಳಿದ್ದರಿಂದ, ಜನರ ರಶ್​ನಿಂದಾಗಿ ಕಂಪನಿಯ ವೆಬ್​ಸೈಟ್​ 2 ದಿನಗಳ ಕಾಲ ಕ್ರ್ಯಾಶ್​ ಆಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv