ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್​ ಬಂಧನ

ಉಡುಪಿ: ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್​ನನ್ನು ಇಂದು ಬಂಧಿಸಲಾಗಿದೆ. ಉಡುಪಿ ನ್ಯಾಯಾಲಯದಿಂದ ಪದ್ಮನಾಭ್​​ ಹೊರಬರುತ್ತಿದ್ದಂತೆ ಕುಂದಾಪುರ ಪೊಲೀಸರು ವಾರೆಂಟ್ ನೀಡಿ ಆತನನ್ನು ಬಂಧಿಸಿದ್ದಾರೆ. ನಿಲಗುಳಿ ಪದ್ಮನಾಭ್ ಬಂಧನಕ್ಕೆ ಪತ್ನಿ ರೇಣುಕಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬಂದರೂ ತಮ್ಮ ಮೇಲೆ ಪೊಲೀಸರಿಂದ ನಿತ್ಯ ಕಿರುಕುಳ ಆಗುತ್ತಿದೆ ಅಂತ ಪದ್ಮನಾಭ್ ಅವ​ರ ಪತ್ನಿ ರೇಣುಕಾ ಗಂಭೀರ ಆರೋಪ ಮಾಡಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ, ನಿಲಗುಳಿ ಗ್ರಾಮದ ನಿವಾಸಿಯಾದ ಪದ್ಮನಾಭ್​, ಕಳೆದ ಹಲವು ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ.ಬಳಿಕ ಗೌರಿ ಲಂಕೇಶ್​ ಅವರ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಡಿಳಿತದ ಮುಂದೆ ನಿಲಗುಳಿ ಪದ್ಮನಾಭ್ ಶರಣಾಗಿದ್ದ. ಈ ಮೂಲಕ 2006ರ ನವೆಂಬರ್​ನಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv