ಮಕ್ಕಳ ಕಳ್ಳರ ವದಂತಿಗೆ ಬಂಧಿಯಾದ ಬೇಟೆಗಾರರು..!

ಯಾದಗಿರಿ: ಬೇಟೆಗೆ ಬಂದವರನ್ನು ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು, ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶಹಾಪೂರ ತಾಲೂಕಿನ ಇಟ್ಟಗಾ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬಿಂಡೆಬಾವಿ ಗ್ರಾಮದಿಂದ ರಮೇಶ್, ಬಸವರಾಜ ಸೇರಿದಂತೆ ಹಲವರು ಬೇಟೆಗೆಂದು ಇಟ್ಟಿಗಾ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಬೇಟೆಗಾರರ ಚಲನವಲನ ನೋಡಿ ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಬೇಟೆಗಾರರನ್ನ ಬಂಧಿಸಿದ ಭೀಮರಾಯನಗುಡಿ ಠಾಣಾ ಪೊಲೀಸರು ಅವರಿಂದ ಒಂದು ಬೊಲೆರೋ ವಾಹನ ಮತ್ತು ಒಂದು ಬೇಟೆ ನಾಯಿಯನ್ನು ವಶಕ್ಕೆ ಪಡೆದಿದ್ದಾರೆ.