ಕಾರಿನ ಗ್ಲಾಸ್​​ ಒಡೆದು ಕನ್ನ ಹಾಕುತ್ತಿದ್ದ 3 ಅಂತರ್​​-ರಾಜ್ಯ ಕಳ್ಳರು ಅಂದರ್​​..!

ಹುಬ್ಬಳ್ಳಿ: ಪಾರ್ಕಿಂಗ್​ನಲ್ಲಿ ನಿಲ್ಲಿಸಿದ ಕಾರುಗಳ ಗ್ಲಾಸ್​​ ಒಡೆದು ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಅಂತರ್​ ರಾಜ್ಯ ಕಳ್ಳರನ್ನು ಹುಬ್ಬಳ್ಳಿಯ ಶಹರ ಪೊಲೀಸರು ಬಂಧಿಸಿದ್ದಾರೆ.
ಸತ್ಯಮೂರ್ತಿ, ಕುಮಾರೇಶ್​​ ಹಾಗೂ ಭಾರತೀರಾಜ್​​ ಬಂಧಿತ ಆರೋಪಿಗಳು. ಇವರೆಲ್ಲರೂ ತಮಿಳುನಾಡಿನ ತಿರುಚನಾಪಳ್ಳಿ ಮೂಲದವರು ಎಂದು ತಿಳಿದುಬಂದಿದೆ. ಈ ಖದೀಮರು ಕಾರುಗಳನ್ನೇ ಟಾರ್ಗೆಟ್​​ ಮಾಡಿಕೊಂಡು ಕಾರಿನಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ನಗರ ಪ್ರದೇಶದಲ್ಲಿ ವಾಸ್ತವ್ಯ ಹೂಡಿ, ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಎಸಗುತ್ತಿದ್ದರು.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳರನ್ನು ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಆ್ಯಪಲ್​​ ಲ್ಯಾಪ್​ಟಾಪ್​​​ ಹಾಗೂ ಒಂದು ಲಕ್ಷ ರೂಪಾಯಿ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಂಧಿತ ಆರೋಪಿಗಳು ಕಳ್ಳತನ ಎಸಗಿದ್ದರು ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv