35 ಲಕ್ಷ ರೂಪಾಯಿ ಮೌಲ್ಯದ ಸಿಗಡಿ ಮೀನಿನ ಮಾರಣ ಹೋಮ

ಉಡುಪಿ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಬಂಟ್ವಾಡಿಯಲ್ಲಿ ಸಿಗಡಿ ಕೃಷಿಯ ಕೆರೆಗೆ ಕಿಡಿಗೇಡಿಗಳು ವಿಷ ಪ್ರಾಶನ ಮಾಡಲಾಗಿದ್ದು, ಅಂದಾಜು 35 ಲಕ್ಷ ರೂಪಾಯಿ ಮೌಲ್ಯದ ಸಿಗಡಿ ಮೀನಿನ ಕೃಷಿ ನಾಶವಾಗಿದೆ.
ಬಂಟ್ವಾಡಿ ನರಸಿಂಹ ಮೊಗವಿರ ಅವರಿಗೆ ಸೇರಿದ ಸಿಗಡಿ ಕೃಷಿ ಕೆರೆಗೆ, 20 ಲೀಟರ್ ವಿಷವನ್ನು ಕ್ಯಾನ್ ಮೂಲಕ ಕೆರೆಗೆ ತೇಲಿ ಬಿಡಲಾಗಿದೆ. ಸಿಗಡಿ ಕೃಷಿಯ ಎರಡು ಕೆರೆಗಳಿಗೆ ವಿಷ ಪ್ರಾಶನ ಮಾಡಲಾಗಿದ್ದು, ಮಾರಾಟಕ್ಕೆ ಸಿದ್ದವಾಗಿದ್ದ ಸಿಗಡಿ ಮೀನುಗಳ ಮಾರಣ ಹೋಮವೇ ನಡೆದಿದೆ. ಗಂಗೊಳ್ಳಿ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ರು. ಕುಂದಾಪುರ ತಾಲೂಕಿನ ಗಂಗೊಳ್ಳಿ ಠಾಣೆ ಯಲ್ಲಿ ಈ ಕುರಿತು ದೂರು ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv