ನೆಚ್ಚಿನ ವರನಟನಿಗಾಗಿ ಕವಿತೆ ಬರೆದಿದ್ದ ಡಿಐಜಿ ಡಾ. ಡಿ.ಸಿ ರಾಜಪ್ಪ..!

ಬೆಂಗಳೂರು: ಇಂದು ವರನಟ ಡಾ.ರಾಜ್ ಕುಮಾರ್ ಅವರ 90ನೇ ವರ್ಷದ ಜನ್ಮದಿನ. ಕನ್ನಡ ಕಂಠೀರವ ಡಾ. ರಾಜಕುಮಾರ್ ಅವರ ಅಭಿಮಾನಿಯಾಗಿದ್ದ ಐಪಿಎಸ್​ ಅಧಿಕಾರಿ, ಹಾಲಿ ರಾಜ್ಯ ಗೃಹ ರಕ್ಷಕ ದಳದ ಡಿಐಜಿ‌ ಡಾ. ಡಿ‌.ಸಿ.ರಾಜಪ್ಪ ಅವರು ಪುಟ್ಟ ಕವನ ಒಂದನ್ನ ಬರೆದು ಗೌರವ ಸಲ್ಲಿಸಿದ್ದರು. 1982ರಲ್ಲಿ ನಟಸಾರ್ವಭೌಮ, ರಾಜ್​ ಕುಮಾರ್​ಗೆ ಪದ್ಮಭೂಷಣ ಪ್ರಶಸ್ತಿ ಬಂದಾಗ ಅವರ ಮೇಲಿನ ಪ್ರೀತಿಗಾಗಿ ಬರೆದ ಕವನದ ಸಾಲುಗಳು ಹೀಗಿವೆ.

ಕನ್ನಡದ ವರಕುವರ ರಾಜಕುಮಾರ
ಕಡೆಗೊಮ್ಮೆ ಏರಿದಿರಾ ಪದ್ಮಭೂಷಣ ಪ್ರಶಸ್ತಿಯ ಉತ್ತುಂಗ ಶಿಖರ
ತಾಳ್ಮೆ-ತನ್ಮಯಗಳ ಚಿನ್ಮಯ ಮೂರ್ತಿ
ಕರ್ನಾಟಕದಿಂದ ಕಾಶ್ಮೀರದವರೆಗೂ ಲಭಿಸಲಿ ಕೀರ್ತಿ
ಅಣ್ಣಾ ಬದುಕು ಕಟ್ಟಿಕೊಳ್ಳಲು ನೀವು ಹಚ್ಚಿದಿರಿ ಬಣ್ಣ
ಬದುಕಿನ ಉದ್ದಕ್ಕೂ ಗಳಿಸಿದಿರಿ ಪ್ರಶಂಸೆಯ ಕರತಾಡನ
ನೀವೊಂದು ವ್ಯಕ್ತಿಯಲ್ಲ, ನೀವೊಂದು ಶಕ್ತಿ
ಷಟ್ಕೋಟಿ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ
ಕಡೆಗೊಮ್ಮೆ ಭಕ್ತಿ ಭಾವದಿಂದ ನಮಿಸುವೆನು
ನಿಮ್ಮ ಸಾಧನೆಯ ಕಂಡು ರಾಜಕುಮಾರ ನಮಸ್ಕಾರ

-ಡಿ.ಸಿ.ರಾಜಪ್ಪ, ಡಿಐಜಿ, ರಾಜ್ಯ ಗೃಹ ರಕ್ಷಕ ದಳ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv