ಕುಗ್ರಾಮದ ಪತ್ರಗಳಿಗೆ ಸ್ಪಂದನೆ ನೀಡೋ ಪ್ರಧಾನಿ, ಇವರ ಪತ್ರಕ್ಕೆ ಮಾತ್ರ..?

ದೆಹಲಿ: ಪವಿತ್ರ ಗಂಗಾನದಿ ಸ್ವಚ್ಛಗೊಳಿಸಿ ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಪ್ರಧಾನಿ ಮೋದಿಗೆ 3 ಬಾರಿ ದಿವಂಗತ ಜಿ.ಡಿ.ಅಗರ್​ವಾಲ್ ಪತ್ರ ಬರೆದಿದ್ದರು. ಆದರೂ ಪ್ರಧಾನಿ ಮೋದಿಯಿಂದ ಹಾಗೂ ಪ್ರಧಾನಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಮಾಹಿತಿ ಹಕ್ಕು ಅಡಿಯಲ್ಲಿ ಬಹಿರಂಗಗೊಂಡಿದೆ. ಬಿಹಾರ​ ಮೂಲದ ಸಾಮಾಜಿಕ ಕಾರ್ಯಕರ್ತ ಉಜ್ವಲ್​ ಕೃಷ್ಣಾಂ ಎಂಬವರು ಸಲ್ಲಿಸಿದ್ದ ಅರ್ಜಿಯಲ್ಲಿ ಈ ಮಾಹಿತಿ ಲಭಿಸಿದೆ. ಗಂಗಾನದಿ ಹೋರಾಟಗಾರ ಜಿ.ಡಿ.ಅಗ್ರವಾಲ್ ಫೆಬ್ರವರಿ 24, ಜೂನ್​ 13 ಹಾಗೂ 23ರಂದು ಒಟ್ಟು ಮೂರು ಬಾರಿ ಪ್ರಧಾನಿ ಕಚೇರಿಗೆ ಪತ್ರ ಬರೆದರೂ ಪ್ರಧಾನಿ ಮೋದಿ ಅಥವಾ ಸಚಿವಾಲಯದಿಂದ ನೇರವಾಗಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಆದ್ರೆ, ಪ್ರಧಾನಿ ಸಚಿವಾಲಯದಿಂದ ಈ ಪತ್ರ ನೀರು ಹಾಗೂ ನೈರ್ಮಲ್ಯ ಇಲಾಖೆಗೆ ಕಳುಹಿಸಿಕೊಡಲಾಗಿದ್ದು ಗಂಗಾ ಶುದ್ಧೀಕರಣದ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು ಎಂದು ತಿಳಿಸಿದ್ದಾರೆ. ಇನ್ನು ಪವಿತ್ರ ಗಂಗೆ ಶುದ್ಧೀಕರಿಸುವಂತೆ 112 ದಿನಗಳ ಸುದೀರ್ಘ ಅಮರಣಾಂತ ಉಪವಾಸ ಮಾಡಿದ್ದ ಪರಿಸರ ತಜ್ಞ, ಗಂಗಾನದಿ ಹೋರಾಟಗಾರ ಜಿ.ಡಿ.ಅಗ್ರವಾಲ್ ಕಳೆದ ಅಕ್ಟೋಬರ್​​ನಲ್ಲಿ ಕೊನೆಯುಸಿರೆಳೆದಿದ್ದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv